ಗದಗ : ಗದಗ ತಾಲೂಕಿನ ಮುಳಗುಂದ ಹಳೆಹುಡಾ ಓಣಿಯ ಹನುಮಂತ ದೇವರ ದೇವಸ್ಥಾನದ ಪಾಲಿಕೆಗೆ 1 ಕೆ.ಜಿ. 200 ಗ್ರಾಮ ತೂಕದ ಬೆಳ್ಳಿ ಕಳಸವನ್ನ ಚನ್ನಮ್ಮ ಮಾದೇವಪ್ಪ ಕೊಲ್ಲಾರಿ ಕುಟುಂಬದವರು ಮಂಗಳವಾರ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಉಮಾ ಮಟ್ಟಿ, ಸದಸ್ಯರಾದ ಎನ್.ಆರ್.ದೇಶಪಾಂಡೆ,ಎಸ್.ಸಿ.ಬಡ್ನಿ,ಬಸವರಾಜ ಹಾರೋಗರಿ, ಮುಖಂಡರಾದ ಅಶೋಕ ಸೋನಗೋಜಿ,ಗುಳಪ್ಪ ಮಜ್ಜಿಗುಡ್ಡ,ಮುತ್ತಣ್ಣ ಜಿಡ್ಡಿ,ಚನ್ನಪ್ಪ ಕರಿಗೋಳಪ್ಪನವರ, ಪರಸಪ್ಪ ಸಂಗನಪೇಟಿ,ಮಹಾಂತಪ್ಪ ದಿವಟರ,ಶೇಖಪ್ಪ ಪೂಜಾರ, ಹನಮಂತಪ್ಪ ಪೂಜಾರ, ಅರ್ಚಕ ರಾಮಣ್ಣ ಪೂಜಾರ ಮೊದಲಾದವರು ಇದ್ದರು. ದೇವಸ್ಥಾನದ ಟ್ರಸ್ಟ್ ವತಿಯಿಂದ ಕೊಲ್ಲಾರಿ ದಂಪತಿಗಳಿಗೆ ಸನ್ಮಾನಿಸಲಾಯಿತು.
Kshetra Samachara
06/10/2022 09:52 am