ಗದಗ: ನಮ್ಮ ಸರಕಾರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಸರಕಾರದಿಂದ ಅನುದಾನ ತಂದು ಕ್ಷೇತ್ರದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಅವರು ಮಾತನಾಡಿದರು.
ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಅಡರಕಟ್ಟಿ - ನಾದಿಗಟ್ಟಿ ರಸ್ತೆಗೆ ಸುಮಾರು 2.30 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಬಡ್ನಿ ಗ್ರಾಮದಲ್ಲಿ ಪು. ಬಡ್ನಿ ಲಕ್ಷ್ಮೇಶ್ವರ - ದೇವಿಹಾಳ ಸುಮಾರು 3 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಪ್ರತ್ಯೇಕ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈಗಾಗಲೇ ಅನೇಕ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇನ್ನೂ ಅನೇಕ ರಸ್ತೆಗಳ ಅಭಿವೃದ್ಧಿಗೆ ಅನುದಾನ ತಂದು ರಸ್ತೆ ಅಭಿವೃದ್ದಿ ಹಾಗೂ ಕ್ಷೇತ್ರದ ಅಭಿವೃದ್ದಿ ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಜಗದೀಶಗೌಡ ಪಾಟೀಲ ಪರಮೇಶ ಹತ್ತಾಳ, ನಿಂಗಪ್ಪ ಪ್ಯಾಟಿ, ಮಂಜುನಾಥ ಗೌರಿ, ಮಹಾಂತೇಶ, ರೇಣವ್ವ ಮಸೂತಿ, ಲಲಿತಾ ಶಿತಾರಹಳ್ಳಿ, ಮಹಾಂತೇಶ ಹೊಳಲಾಪುರ, ಹಾಲಪ್ಪ ಸೂರಣಗಿ, ಪರಶುರಾಮ ಇಮ್ಮಡಿ, ಶಿವಣ್ಣ ಲಮಾಣಿ, ಕಲ್ಲಪ್ಪ ಹಡಪದ, ರಾಮಣ್ಣ ರಿತ್ತಿ ಪುಂಡಲೀಕ ಲಮಾಣಿ, ಶಿವಶರಣಪ್ಪ ಚೋಟಗಲ್, ವೆಂಕಟೇಶ ಪೂಜಾರ, ಮೈಲಾರಿ ಕಾಳೆ ಇದ್ದರು.
Kshetra Samachara
04/10/2022 11:47 am