ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ಮನಗಳಲ್ಲಿ ಕನ್ನಡತನ ಜಾಗೃತಗೊಳಿಸಿ

ಗದಗ : ಕನ್ನಡ, ಕನ್ನಡತನ ಹಾಗೂ ಕನ್ನಡ ಸಂಸ್ಕೃತಿಗಳು ನಾಡಿನ ಅಸ್ಮಿತೆಯ ಸಂಕೇತ. ಮನೆ ಮನಗಳಲ್ಲಿ ಕನ್ನಡತನ ಜಾಗೃತಗೊಳಿಸಿ ಶಾಶ್ವತಗೊಳಿಸುವಂತಾಗಬೇಕು ಎಂದು ಹಿರಿಯ ಶಿಕ್ಷಕಿ ಹಾಗೂ ಸಾಹಿತಿಗಳಾದ ಜೆ ವಿ ಅರಳಿಕಟ್ಟಿ ಅವರು ಅಭಿಪ್ರಾಯ ಪಟ್ಟರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕ ಘಟಕ ನೂತನವಾಗಿ ಆರಂಭಿಸಿದ ಮನೆ ಕನ್ನಡ-ಮನ ಕನ್ನಡ ಕಾರ್ಯಕ್ರಮ ಸರಣಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಉಪನ್ಯಾಸಕರಾಗಿ ಭಾಗವಹಿಸಿದ್ದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸೋಮಶೇಖರ್ ಕೆರಿಮನಿ ಮಾತನಾಡಿ ಮಹಾತ್ಮ ಗಾಂಧೀಜಿ ಜಗತ್ತಿನ ಶಾಂತಿದೂತನಾದರೆ, ಲಾಲ್ ಬಹದ್ದೂರ್ ಶಾಸ್ತ್ರಿಜಿ ಜಗದ ನಿಷ್ಕಾಮಕರ್ಮಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಹಲವಾರು ರಚನಾತ್ಮಕ ಕಾರ್ಯಕ್ರಮಗಳ ಕುರಿತು ತಿಳಿಸಿದರು.ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ರಾಂತ ಆರೋಗ್ಯಾಧಿಕಾರಿಗಳಾದ ಎಂ.ಬಿ ಹುಬ್ಬಳ್ಳಿ ಮಾತನಾಡಿದರು.

ಕುಮಾರಿ ಭಾವನ,ಮಾನಸ,ಅಕ್ಷತಾ ಪ್ರಾರ್ಥಿಸಿದರು.ಶಿಕ್ಷಕರಾದ ಎಂ.ಎಂ ಮಳಿಮಠ ಸ್ವಾಗತಿಸಿದರು. ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿಯಾದ ಚಂದ್ರು ನೇಕಾರ ಹಾಗೂ ಕುಮಾರಿಯರಾದ ಭೂಮಿಕ,ಸನ್ನಿಧಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾಕ್ಟರೇಟ್ ಪದವಿ ಪಡೆದ ಗಿರೀಶ್ ಎತ್ತಿನಹಳ್ಳಿ, ಕ.ರಾ.ವಿ.ಪ ಜಿಲ್ಲಾಧ್ಯಕ್ಷರಾದ ರಮೇಶ್ ರಿತ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಚ್.ಡಿ ನಿಂಗರೆಡ್ಡಿ ಇವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈರಣ್ಣ ಗಾಣಿಗೇರ ನಿರೂಪಿಸಿದರು. ಶಿಕ್ಷಕ ನಾಗರಾಜ ಮಜ್ಜಿಗುಡ್ಡ ವಂದಿಸಿದರು.

ಈ ಸಂದರ್ಭದಲ್ಲಿ ಲಲಿತಾ ಕೆರಿಮನಿ,ಶ್ರೀಮತಿ ಸರೋಜಾ ಬನ್ನೂರ್,ಪಿ.ಎಚ್.ಕೊಂಡಾಬಿಂಗಿ, ಆಯ್.ಎ.ಬಳಿಗಾರ,ಆರ್.ಎಫ್.ದೊಡ್ಡಮನಿ,ಆನಂದ ಮಹಾಂತಶೆಟ್ಟರ, ವಿ.ವಿ ಗೊಲ್ಲರ, ಶಂಭು ಕನವಳ್ಳಿ, ಬಿ.ಎಚ್ ನಡುವಿನಮನಿ, ಎಂ.ಬಿ ಸಂಗನಪೇಟೆ,ಲೆಕ್ಕದ, ಶ್ರೀಮತಿ ಗಂಗಮ್ಮ ನಾಯಕ, ಶೈಲಜಾ ರಿತ್ತಿ, ಪುಷ್ಪ ಮೇಲಗಿರಿ, ಅನ್ನಪೂರ್ಣ ರಾಯಣ್ಣನವರ, ಪ್ರೀತಿ ಮಳಿಮಠ ಸೇರಿದಂತೆ ಉಪನಾಳ ಪಾರ್ಕ್ ನ ಹಲವಾರು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

03/10/2022 03:47 pm

Cinque Terre

7.44 K

Cinque Terre

0