ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಗಾಂಧಿ ಜಯಂತಿ ವಿಶೇಷ ಗ್ರಾಮಸಭೆ

ಗದಗ: ತಾಲೂಕಿನ ಮುಳಗುಂದ ಸಮೀಪದ ಸೊರಟೂರ ಗ್ರಾಮ ಪಂಚಾಯ್ತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಭವನದಲ್ಲಿ ಭಾನುವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೈಬೂಸಾಬ ಯಕ್ಲಾಸಪೂರ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಅವರು, ಗಾಂಧೀಜಿ ಅವರ ಸ್ವಚ್ಛ ಭಾರತ ಕನಸು ನನಸು ಮಾಡುವಲ್ಲಿ ಸಂಘ ಸಂಸ್ಥೆಗಳು ಗ್ರಾಮ ಪಂಚಾಯ್ತಿಯೊಂದಿಗೆ ಕೈಜೋಡಿಸಿದೆ. ಸ್ವಚ್ಛತೆ ಇರುವಲ್ಲಿ ಆರೋಗ್ಯ ಪೂರ್ಣ ಸಮಾಜ ಸಾಧ್ಯ ಎಂದರು. ಸಭೆಯಲ್ಲಿ ನರೇಗಾ ಯೋಜನೆ ಅಡಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿ ಕ್ರೀಯಾ ಯೋಜನೆ ಸಿದ್ದಪಡಸುವದು, ಗ್ರಾಮ ಪಂಚಾಯ್ತಿ ಆಸ್ತಿಗಳ ಸಮೀಕ್ಷೆ ಸೇರಿದಂತೆ ದೂರದೃಷ್ಠಿ ಅಭಿವೃದ್ದಿ ವಿಷಯಗಳ ಚರ್ಚೆ ನಡೆದವು.

ಸಭೆಯಲ್ಲಿ ಗ್ರಾಮ ಪಂಚಾಯ್ತಿ ಪಿಡಿಒ ಮಾಲತೇಶ ಮೇವುಂಡಿ, ಸದಸ್ಯರಾದ ಫಕ್ಕಿರವ್ವ ಹರಿಜನ, ಶಿವಮೂರ್ತಿ ಕರಿಗೌಡ್ರ, ನೀಲಗಿರಿಗೌಡ ಪಾಟೀಲ, ಮರಿಯಪ್ಪ ಸಣ್ಣತಂಗಿಯವರ, ಮಹಾದೇವಪ್ಪ ಹಡಪದ,ಲಕ್ಷ್ಮೀ ಮಠಪತಿ,ಜಯಶ್ರೀ ಬಂಕಾಪೂರ,ಪ್ರೇಮಾ ಕಟಗಿ,ಹುಸೇನಬಿ ಚೋಳ್ಳಣ್ಣವರ,ದೇವಮ್ಮ ಓಂಕಾರಿ, ದೇವಕ್ಕ ಜಮಗಿ,ಬಸವರಾಜ ಖಾನಾಪೂರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲಗುಡಿ, ಮೊದಲಾದವರು ಭಾಗವಹಿದ್ದರು.

Edited By : PublicNext Desk
Kshetra Samachara

Kshetra Samachara

02/10/2022 07:24 pm

Cinque Terre

8.9 K

Cinque Terre

0