ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ.2ರಂದು ಹಿಂದುಳಿದ ವರ್ಗಗಳ ಜಾಗೃತಿಯ ರಾಜ್ಯ ಸಮಾವೇಶ : ಪೂರ್ವಭಾವಿ ಸಭೆ

ಗದಗ : ಅಕ್ಟೋಬರ್ 30 ರಂದು ಕಲಬುರಗಿ ನಡೆಯುವ ಹಿಂದುಳಿದ ವರ್ಗಗಳ ಜಾಗೃತಿ ರಾಜ್ಯ ಸಮಾವೇಶ ಅಂಗವಾಗಿ ಅಕ್ಟೋಬರ್ 2 ರಂದು ನಗರದಲ್ಲಿನ ಜಿಲ್ಲಾ ಹಿಂದುಳಿದ ವರ್ಗಗಳ ಪೂರ್ವಬಾವಿ ಸಭೆ ನಡೆಯಲಿದೆ ಎಂದು ಒಬಿಸಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರವಿ ದಂಡಿನ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಪಕ್ಷದ ಮುಖಂಡರ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ನವರು ಏನೂ ಮಾಡಿಲ್ಲ. ಖಾಲಿ ಡಬ್ಬ ಅಲುಗಾಡಿಸಿ ಶಬ್ಬ ಜಾಸ್ತಿ ಮಾಡಿದ್ದು ಬಿಟ್ಟರೆ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ವರ್ಗದ ಸಮಾವೇಶ ಮಾಡದೇ ಸಿದ್ಧರಾಮೋತ್ಸವ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿಭಜನೆಯತ್ತ ಸಾಗಿದೆ. ಹಿಂದುಳಿದ ವರ್ಗದರಿಗೆ ವಿವಿಧ ಇಲಾಖೆ, ಹುದ್ದೆಯಲ್ಲಿ ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗಗಳದವರು ತಮ್ಮ ಕಾಲ ಮೇಲೆ ತಾವು ನಿತ್ತು ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ಬಿಜೆಪಿ ಸರಕಾರ ಕಾರಣ ಬಿಟ್ಟರೆ ಕಾಂಗ್ರೆಸನವರು ಜನರಿಗೆ ಮೂಗಿಗೆ ತುಪ್ಪ ಸವರಿ ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ. ಹಿಂದುಳಿದವರ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದರು.

ಸಚಿವ ಭೈರತಿ ಬಸವರಾಜ ನೇತೃತ್ವದ ತಂಡವು ಅಕ್ಟೋಬರ್‌ 2ರಂದು ಶಾಸಕ .ಹೆಚ್. ತಿಪ್ಪಾರೆಡ್ಡಿ,ಶಾಸಕ ಕರುಣಾಕರ ರೆಡ್ಡಿ,ವಿಧಾನ ಪರಿಷತ್ ಸದಸ್ಯ ಗಣೇಶ ಉಚ್ಚೇಕ‌,ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ ಬಾಬು,ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ,ನಿಗಮ ಮಂಡಳ ಅಧ್ಯಕ್ಷ ನರೇಶ್‌ಕುಮಾರ್ ಹಾಗೂ ಜಿಲ್ಲಾ ಬಿಜೆಪಿ ಎಲ್ಲಾ ಪದಾಧಿಕಾರಿಗಳು ಮತ್ತು ಓಬಿಸಿ ಮಂಡಲ ಪದಾಧಿಕಾರಿಗಳು ಭಾಗವಹಿಸಿವರು ಎಂದು ವಿವರಿಸಿದರು.

Edited By : PublicNext Desk
Kshetra Samachara

Kshetra Samachara

30/09/2022 05:04 pm

Cinque Terre

8.08 K

Cinque Terre

0

ಸಂಬಂಧಿತ ಸುದ್ದಿ