ಗದಗ: ತಾಲೂಕಿನ ನಾಗಸಮುದ್ರದಲ್ಲಿ ಗುರುವಾರದಂದು 9.70 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ ಚಾಲನೆ ನೀಡಿದ್ರು.
ಲೋಕೋಪಯೋಗಿ ಇಲಾಖೆಯಿಂದ ಪಾಲಾ ಬಾದಾಮಿ ನಾಗಸಮುದ್ರ-ನರಸಾಪುರ ಕೂಡು ರಸ್ತೆ ದುರಸ್ತಿ ಗೆ 200 ಲಕ್ಷ , ನಾಗಸಮುದ್ರ ಚಿಕ್ಕೊಪ್ಪ ರಸ್ತೆ 0 ಕಿಮೀಯಿಂದ 1.50 ಯವರೆಗೆ ರಸ್ತೆ ಸುಧಾರಣೆ ಹಾಗೂ ಜವಳ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ 270 ಲಕ್ಷ , ಎಚ್.ಎಸ್. 06 ದಿಂದ ನಾಗಸಮುದ್ರ ಕೂಡು ರಸ್ತೆ 2.70 ಕಿ.ಮೀಯಿಂದ 2.90 ವರೆಗೆ ರಸ್ತೆ ಸುಧಾರಣೆಗೆ 25 ಲಕ್ಷ ಅನುದಾನ ಒದಗಿಸಿದೆ.
ಗದಗ ತಾಲೂಕಿನ ನಾಗಸಮುದ್ರದ ಗ್ರಾಮದ ಹತ್ತಿರ ಗದ್ದಿಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಮತ್ತು ಹಳ್ಳದ ಸುಧಾರಣೆಗೆ 172 ಲಕ್ಷ , ನಾಗಸಮುದ್ರ ಕಣಗಿನಹಾಳ ರಸ್ತೆ ಸುಧಾರಣೆಗೆ 4 ಕಿ.ಮೀಗೆ 35 ಲಕ್ಷ , ನಾಗಸಮುದ್ರ ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ 25 ಲಕ್ಷ , ಗ್ರಾಮದ ಕೆಂಚಮ್ಮ ದೇವಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 5 ಲಕ್ಷ ಅನುದಾನ ನೀಡುವ ಮೂಲಕ ಈ ಎಲ್ಲ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕಾಮಗಾರಿಗಳು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
Kshetra Samachara
29/09/2022 08:24 pm