ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಾನುವಾರಗಳಿಗೆ ಚರ್ಮಗಂಟುರೋಗ ಉಲ್ಬಣ; ಸ್ಥಳದಲ್ಲಿಯೇ ಚಿಕಿತ್ಸೆಗೆ ರೈತರ ಆಗ್ರಹ

ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಜಾನುವಾರಗಳಿಗೆ ಚರ್ಮಗಂಟುರೋಗ ಉಲ್ಬಣ ವಾಗಿದ್ದು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಅಮರೀಶ ತೆಂಬದಮನಿ ಹಾಗೂ ಮುಖಂಡ ಯಲ್ಲಪ್ಪ ಹಂಜಗಿ ಹೇಳಿದರು.

ಅವರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಿರೆಸ್ತದಾರ ರೇಣುಕಾ ಹರಿಜನ ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳರಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ, ಈ ರೋಗದಿಂದ ತಾಲೂಕಿನಲ್ಲಿ ದಿನೇ ದಿನೇ ಜಾನುವಾರಗಳು ಸಾವನ್ನು ಹೊಂದುತ್ತಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ. ಕಾರಣ ಕೂಡಲೇ ರಾಜ್ಯ ಸರಕಾರ ಹಾಗೂ ತಾಲೂಕಿನ ಜನಪ್ರತಿನಿಧಿಗಳು ಎಚ್ಚೆತ್ತು ಕೂಡಲೇ ಧನಕರುಗಳಿಗೆ ಚಿಕಿತ್ಸೆ ಸ್ಥಳದಲ್ಲಿ ಸಿಗುವಂತಾಗಬೇಕು. ಜಾನುವಾರಗಳನ್ನು ಕಳೆದು ಕೊಂಡ ರೈತರ ಸಹಾಯಕ್ಕೆ ಸರಕಾರ ಮುಂದೆ ಬರಬೇಕು. ಈಗಾಗಲೇ ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗಿ ಕಂಗಾಲು ಆಗಿದ್ದ ರೈತ ಸಮೂಹಕ್ಕೆ ಈ ರೋಗವು ರೈತರ ಹೊಟ್ಟೆಗೆ ಮತ್ತೊಂದು ಕೊಡಲಿ ಪೆಟ್ಟು ಬಿದ್ದಿದ್ದು ರೈತರ ಸಂಕಷ್ಟಕ್ಕೆ ಸರಕಾರ ಶೀಘ್ರದಲ್ಲಿ ಪರಿಹಾರ ಕೊಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕಿರಣ ನವಲೆ, ನೀಲಪ್ಪ ಪಡಗೇರಿ, ವೀರೇಂದ್ರ ಭಜಂತ್ರಿ, ಶಿವರಾಜ ಆದಿ, ಶಶಿಕಲಾ ಬಡಿಗೇರ, ಸುಮಾ ಚೋಟಗಲ್, ಡಿ ಕೆ ಟಕ್ಕೆದ, ಮಲ್ಲಿಕಾರ್ಜುನ ಓoಕಾರಿ, ಸದಾನಂದ ಸoಬಾಜಿ, ಕೆ ಓ ಹುಲಿಕಟ್ಟಿ, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/09/2022 10:08 am

Cinque Terre

5.92 K

Cinque Terre

0