ಗದಗ: ತಾಂಡಾಗಳಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಬೇಕು ಹಾಗೂ ಮುಂದಿನ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಕಾರ್ಯವನ್ನು ತಾಲೂಕಿನ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಬೇಕೆಂದು ಕರ್ನಾಟಕ ಬಂಜಾರ ಸಂತ ಸೇವಾಲಾಲ ಸಂಘ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪರಮೇಶ ಲಮಾಣಿ ಲಕ್ಷ್ಮೇಶ್ವರ ತಾಲೂಕಿನಲ್ಲಿ 14 ತಾಂಡಾಗಳಿದ್ದು, ತಾಲೂಕಿನ ಬಹುತೇಕ ತಾಂಡಾಗಳಿಲ್ಲಿ ವೃದ್ಧರು, ವಿಷೇಶಚೇತನರು ಇದ್ದು ಮಾಸಾಶನದಿಂದ ವಂಚಿತರಾಗಿದ್ದಾರೆ. ಮಾಸಾಶನ ಮಾಡಿಸುವದಾಗಿ ಮಧ್ಯವರ್ತಿಗಳು ನಾಲಕೈದು ಸಾವಿರ ರೂಪಾಯಿಗಳು ತಗೊತಾರೆ. ಆದರೆ ತಾಂಡಾಗಳ ಜನರು ಕುಡು ಬಡವರಾಗಿದ್ದು ಹಣ ಕೊಡಲಿಕೆ ಆಗದೆ ಮಾಸಾಶನದಿಂದ ವಂಚಿತರಾಗಿದ್ದು, ಅವರ ಪರಿಸ್ಥಿತಿ ಹೇಳತಿರದು. ಹಾಗಾಗಿ ಜಿಲ್ಲಾಧಿಕಾರಿಗಳ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ತಾಂಡಾ ಜನರಿಗೆ ಮಾಸಾಶನ ಮತ್ತು ಇತರೆ ವೇತನಗಳನ್ನು ದೊರಕಿಸಿಕೊಡ ಬೇಕೆಂದು ಹೇಳಿದರು.
ನಂತರ ಮಾತನಾಡಿದ ರಮೇಶ ಲಮಾಣಿ ಮತ್ತು ಗೋಪಿ ನಾಯಕ ತಾಂಡ ಜನರು ಅನಕ್ಷರಸ್ಥರಾಗಿದ್ದು, ಸರಕಾರದ ಸೌಲಭ್ಯಗಳ ತಿಳಿಯದೆ. ಹಾಗೆ ಇದ್ದಾರೆ ಹಾಗಾಗಿ ಯಶಸ್ವಿಯಾಗಿ ಜರಗುತ್ತಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ತಾಂಡಾ ಜನರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಬೇಕು, ಪಿಂಚಣಿ ಅದಾಲತವನ್ನು ತಾಂಡಾಗಳಲ್ಲಿ ಹಮ್ಮಿಕೊಳ್ಳಬೇಕು ಹಾಗೂ ಮುಂದಿನ ಈ ಕಾರ್ಯವನ್ನು ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಬೇಕು ಎಂದರು.
ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪರಮೇಶ ಲಮಾಣಿ, ಖಜಾಂಚಿ ರಮೇಶ ಲಮಾಣಿ, ಉಪಾಧ್ಯಕ್ಷ ಗೋಪಿ ನಾಯಕ, ಸುರೇಶ ಲಮಾಣಿ, ಮುಂಜು ರಾಠೋಡ, ಸುರೇಶ ಮಾಳಗಿಮನಿ, ರವಿ ಲಮಾಣಿ, ಗಣೇಶ ನಾಯಕ, ಗೋವಿಂದ ಕಾರಭಾರಿ, ನಾಗೇಶ ಲಮಾಣಿ, ಬಸವರಾಜ ಲಮಾಣಿ, ಮಾರುತಿ ಲಮಾಣಿ, ಕೀರಣ ಲಮಾಣಿ ಇದ್ದರು.
Kshetra Samachara
20/09/2022 04:19 pm