ಗದಗ. ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೇರಿ ಗ್ರಾಮದ ಶೆಟ್ಟಿಕೆರೆಯ ನೀರನ್ನು ರೈತರ ಜಮೀನುಗಳಲ್ಲಿ ಹರಿಯದಂತೆ ಕ್ರಮವಹಿಸಲು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕ ಬಟ್ಟೂರು ಹಾಗೂ ಶೆಟ್ಟಿಕೇರಿ ರೈತ ಭಾಂಧವರು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರಿಗೆ ಮನವಿ ಸಲ್ಲಿಸಿದರು.
ಶೆಟ್ಟಿಕೇರಿ ಗ್ರಾಮದ ಕೆರೆಯು 214 ಎಕ್ಕರೆ ವಿಸ್ತೀರ್ಣವುಳ್ಳ ಜಿಲ್ಲೆಯ ದೊಡ್ಡ ಕೆರೆ ಇದಾಗಿದೆ. ಕಳೆದ ದಿನಾಂಕ 30-08 2022 ರಂದು ಧಾರಾಕಾರ ಅತಿವೃಷ್ಟಿ ಅಕಾಲಿಕ ಮಳೆ ಸುರಿದಿದ್ದರಿಂದ ಶೆಟ್ಟಿಕೇರಿ ಗ್ರಾಮ ಕೆರೆಯೂ ಸಂಪೂರ್ಣ ತುಂಬಿ ಕೋಡಿ ಒಡೆದು ನೀರು ಹೋರಗಡೆ ಹರಿಯುತ್ತಿದ್ದು.
ಕೆರೆಯಿಂದ ಹರಿದು ಬರುವ ನೀರು ತನ್ನ ಮೂಲ ಕೆರೆಕಾಲುವೆಯಿಂದ ಹರಿದು ಹೋಗದೆ ಬೇರೆ ಸರ್ವೆ ನಂಬರುಗಳ ರೈತರ ಸ್ವಂತ ಮಾಲಕಿ ಜಮೀನುಗಳಿಗೆ ನೀರುನುಗ್ಗಿದ ಕಾರಣ 13875 ಎಕ್ಕರೆ ಗಿಂತಲು ಹೆಚ್ಚು ಜಮೀನುಗಳಲ್ಲಿ ಬೆಳೆದು ನಿಂತ ಬೆಳೆಗಳು ಹಾಗೂ ಫಲವತ್ತಾದ ಮಣ್ಣು ನೀರಿನ ರಬಸಕ್ಕೆ ಸಂಪೂರ್ಣಕೊಚ್ಚಿಕೊಂಡು ಹೋಗಿದ್ದು ಮತ್ತು ನೀರಿನಲ್ಲಿ ನಿಂತ ಬೆಳಗಳು ಕೊಳೆತ್ತಿರುತ್ತವೆ,
ಇದರಿಂದಾಗಿ ಸುಮಾರ 40 ಗಿಂತಲೂ ಹೆಚ್ಚು ರೈತರಿಗೆ ತುಂಬಾ ಹಾನಿ ಆಗಿರುತ್ತದೆ, ಆದ್ದರಿಂದ ಬಟ್ಟೂರ ಹಾಗೂ ಶೆಟ್ಟಿಕೇರಿ ರೈತರ ಹಿತದೃಷ್ಟಿಯಿಂದ ಮತ್ತು ಮುಂದಿನ ದಿನಗಳಲ್ಲಿ ಇದಕ್ಕಿಂತ ಹೆಚ್ಚೆಚ್ಚು ಕೆರೆಯ ನೀರು ಹರಿದು ಬಂದು ಜನ ಜಾನುವಾರು ಹಾಗೂ ಬೆಳೆಗಳಿಗೆ ತೊಂದರೆ ಆಗದಂತ ಮುಂಜಾಗ್ರತವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಹಿಸಿದ್ದಾರೆ.
ಶೆಟ್ಟಿಕೇರಿ ಕೆರೆಯೂ ಸಣ್ಣ ನೀರಾವರಿ ಇಲಾಖೆ ಒಳಪಡುವುದರಿಂದ ನಾವುಗಳು ಬೇರೆ ಯಾವ ರೈತರನ್ನು ದೂರುವುದಿಲ್ಲಾ, ದೂರುವ ಅವಶ್ಯಕತನೂ ಇಲ್ಲಾ ಆದ್ದರಿಂದ ಇಲಾಖೆ ಯೋಜನೆಯಡಿಯಲ್ಲಿ ಅಂದಾಜು ಪತ್ರಿಕೆ ಹಾಗೂ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡು ಶೆಟ್ಟಿಕೇರಿ ನೀರು ಹರಿದುಹೋಗುವ ಅದರ ಮೂಲ ಕಾಡುವ ಮುಖಾಂತರ ನೀರು ಹರಿದು ಹೋಗಲು ಶೀಘ್ರವಾಗಿ ಕಾಮಗಾರಿಯನ್ನು ಗೆತ್ತಿಕೊಳ್ಳಬೇಕು.
ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಕೆರೆಯ ನೀರು ಹರಿದು ನಮ್ಮ ಜಮೀನುಗಳಿಗೆ ನುಗ್ಗಿದಲ್ಲಿ ಜನ ಜಾನುವಾರು, ಬೆಳೆದ ಬೆಳೆ, ಭೂಮಿಯ ಮಣ್ಣು ಸವಕಳಿ ಹಾನಿ ಹಾಗೂ ಹಾನಿಗೆ ತಮ್ಮ ಇಲಾಖೆಯಿಂದಲೇ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
Kshetra Samachara
20/09/2022 04:00 pm