ಗದಗ: ಗದಗ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಟ್ರಾಕ್ಟರ್ ಚಲಾಯಿಸಿದ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದ ಹಳ್ಳವೊಂದರಲ್ಲಿ ಹರಸಹಾಸಕ್ಕೆ ಟ್ರ್ಯಾಕ್ಟರ್ ಚಾಲಕ ಕೈ ಹಾಕಿದ್ದಾನೆ. ಅಪಾಯದಿಂದ ಪಾರಾಗಿದ್ದಾನೆ. ಸ್ಪಲ್ಪ ಹೆಚ್ಚು ಕಮ್ಮಿಯಾದ್ರೂ ಅಪಾಯ ಆಗುವುದು ಗ್ಯಾರಂಟಿ ಇತ್ತು. ಆದರೆ ಸಾರ್ವಜನಿಕರು ಈ ಕಡೆ ಬನ್ನಿ ಆ ಕಡೆ ಬನ್ನಿ ಎಂದು ಹೇಳಿದ್ದಕ್ಕೆ ಟ್ರ್ಯಾಕ್ಟರ್ ಹಳ್ಳ ದಾಟಿದೆ ಈ ಹಿಂದೆ ಇದೇ ಹಳ್ಳದ ಅಬ್ಬರಕ್ಕೆ ಸರ್ಕಾರಿ ಬಸ್ ಕೊಚ್ಚಿ ಹೋಗಿದ ಘಟನೆ ಜರುಗಿ ಹೋಗಿದೆ. ಆದ್ರೂ ಜವಾಬ್ದಾರಿ ಮರೆತ ಜನ್ರು ತುಂಬಿದ ಹಳ್ಳದಲ್ಲಿ ಸಂಚಾರ ಮಾಡುತ್ತಿದ್ದಾರೆ.
PublicNext
30/09/2022 09:50 pm