ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದೂ ಪಟ್ಟಣದ 10ನೇ ವಾರ್ಡಿನಲ್ಲಿ ಸೋಮಯ್ಯ ಬಾಳೇಶ್ವರಮಠ ಅವರ ಮನೆಯ ಕಾಂಪೌಂಡ್ ಕುಸಿದಿದೆ. ಅಲ್ಲದೆ ನೆಲವು ಕುಸಿತ ಕಂಡು ರಸ್ತೆಯು ಕೆಲಕಾಲ ಬಂದು ಆಗಿದ್ದು, ಜಿಸಿಬಿ ಯಿಂದ ರೋಡನಲ್ಲಿ ಇದ್ದ ಮಣ್ಣನ್ನು ಹೊರತೆಗೆಯಲಾಯಿತು.
ಪಟ್ಟಣದಲ್ಲಿ ಹೀಗೆ ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಗಳು ಕುಸಿಯುತ್ತಿರುವುದರಿಂದ ಜನರ ಭಯಭಿತರಾಗಿದ್ದಾರೆ. ಸರಕಾರವು ನಮಗೆ ಪರಿಹಾರ ಒದಗಿಸಬೇಕು ಎಂದು ಮನೆಯ ಮಾಲೀಕ ಸೋಮಯ್ಯ ಬಾಳೆಶ್ವರಮಠ ಹೇಳಿದರು.
PublicNext
13/09/2022 11:07 am