ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮರಿ ಸಾವನ್ನಪ್ಪಿದರೂ ಮಡಿಲಿನಿಂದ ದೂರ ಮಾಡದ ತಾಯಿ ಕೋತಿ

ಗದಗ: ಗದಗ ಜಿಲ್ಲೆಯಲ್ಲೊಂದು ಮೂಕಪ್ರಾಣಿಯ ಪ್ರಸಂಗ ಕರುಣಾಜನಕ ಘಟನೆಗೆ‌ ಸಾಕ್ಷಿಯಾಗಿದೆ. ಹೌದು ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ನಗರದಲ್ಲಿ ಧಾರಾಕಾರ ಮಳೆಗೆ ಆಗ‌ ತಾನೇ ಜನಿಸಿದ ಮರಿಕೋತಿ ಸಾವನ್ನಪ್ಪಿದೆ.

ಆದರೆ ಮರಿಕೋತಿ ಉಸಿರು ನಿಲ್ಲಿಸಿದರೂ ತಾಯಿ ಕೋತಿ ತನ್ನ ಕಂಕುಳಲ್ಲಿಯೇ ಇಟ್ಟು ಜೋಪಾನ ಮಾಡ್ತಿದೆ. ಮೂಕ ಪ್ರಾಣಿಯ ಮುಗ್ಧ ಮಮತೆಗೆ‌ ಈ ತಾಯಿ ಪ್ರೀತಿ ಸಾಕ್ಷಿಯಾಗಿದೆ. ಮರಿಕೋತಿ ಸಾವನ್ನಪ್ಪಿ ಎರಡು ದಿನಗಳಾದ್ರೂ ತನ್ನ ಮಡಿಲಲ್ಲೇ ಜೋಪಾನ ಮಾಡುತ್ತಾ ದಿನಗಳೆಯುತ್ತಿದೆ. ಈ‌ ಅಪರೂಪದ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು ಮೂಕ ಪ್ರಾಣಿಯ ತಾಯಿ ಮಗುವಿನ ಪ್ರೀತಿ ಕಂಡು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Edited By : Somashekar
PublicNext

PublicNext

12/09/2022 02:58 pm

Cinque Terre

22.67 K

Cinque Terre

0