ಗದಗ: ಬಿಂಕದಕಟ್ಟಿ ಮೃಗಾಲಯದ ಭೀಮಾ ಎಂಬ ಚಿರತೆಯನ್ನ ಶೌರ್ಯ ಮರೆಣ್ಣವರ್ ಎಂಬ ಐದು ವರ್ಷದ ಬಾಲಕ ದತ್ತು ಪಡೆದಿದ್ದಾನೆ. ಬಿಂಕದಕಟ್ಟಿ ಮೃಗಾಲಯದ ಅಧಿಕಾರಿಯಾಗಿರೋ ಆರ್ ಎಫ್ ಒ ಮಹೇಶ್ ಮರೆಣ್ಣವರ್ ಅವರ ಪುತ್ರ ಶೌರ್ಯನ ಐದನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ದತ್ತು ಪಡೆಯಲಾಗಿದೆ. ದತ್ತು ಪಡೆಯಲು ನಿಗಧಿ ಪಡಿಸಿದ 50 ಸಾವಿರ ರೂಪಾಯಿ ಪಾವತಿಸಿ ವರ್ಷದ ಮಟ್ಟಿಗೆ ಚಿರತೆಯನ್ನ ದತ್ತು ಪಡೆಯಲಾಗಿದೆ.
ಶೌರ್ಯನಿಗೆ ಚಿರತೆ ಅಂದ್ರೆ ಇಷ್ಟ. ಹೀಗಾಗಿ ಹುಟ್ಟು ಹಬ್ಬದ ಉಡುಗೊರೆ ರೂಪದಲ್ಲಿ ಶೌರ್ಯನಿಗೆ ಚಿರತೆ ದತ್ತು ಪಡೆದಿದ್ದೇನೆ ಅಂತಾರೆ ಶೌರ್ಯ ಅವರ ತಂದೆ ಮಹೇಶ್.
ಮಹೇಶ ಅರಣ್ಯ ಇಲಾಖೆ ಅಧಿಕಾರಿಯಾಗಿರೋದ್ರಿಂದ ಶೌರ್ಯ ಅವರಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ.. ಮಹೇಶ ಅವರು ಈ ಹಿಂದೆ ಬ್ಯಾಡಗಿ ರೇಂಜ್ ನಲ್ಲಿದ್ದಾಗ ಚಿರತೆ ಗಣತಿ, ಕ್ಯಾಮರಾ ಅಳವಡಿಸುವ ಕೆಲಸಕ್ಕೆ ಶೌರ್ಯ ಜೊತೆಗೆ ಹೋಗ್ತಿದ್ದ.. ಅಲ್ದೆ, ಚಿರತೆ ರಕ್ಷಣೆ ಮಾಡ್ದಾಗ ಸ್ಥಳಕ್ಕೆ ಭೇಟಿ ಕೊಟ್ಟು ಚಿರತೆ ಬಗ್ಗೆ ಅತೀವ ಆಸಕ್ತಿಯಿಂದ ಮಾಹಿತಿ ಪಡೀತಿದ್ನಂತೆ.. ಹೀಗಾಗಿ ಮಗನ ಆಸೆಯಂತೆ ಬಿಂಕದಕಟ್ಟಿ ಮೃಗಾಲಯದಲ್ಲಿ ಪ್ರಾಣಿ ದತ್ತು ಪಡೆಲಾಗಿದೆ.
PublicNext
15/09/2022 03:51 pm