ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪ್ರಾಣ ಪಣಕ್ಕಿಟ್ಟು ಕೆಲಸ ನಿರ್ವಹಿಸಿದ ಹೆಸ್ಕಾಂ ಸಿಬ್ಬಂದಿ

ಗದಗ: ಗದಗ ಜಿಲ್ಲೆಯಲ್ಲಿ ಇಷ್ಟು‌ ದಿನಗಳ ಕಾಲ ಮಳೆರಾಯನ ಕಾಟ ಜೋರಾಗಿತ್ತು. ಇದೀಗ ಮಲಪ್ರಭಾ ನದಿ ಪ್ರವಾಹ ಹಿನ್ನೆಲೆ ಅಲ್ಲಿನ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.

ಹೌದು. ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿ ಮಲಪ್ರಭಾ ನದಿ ಪ್ರವಾಹ‌ ನಿಧಾನವಾಗಿ ಶುರುವಾಗುತ್ತಿದೆ. ಈ ಮಧ್ಯೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಬಳಿ ಪ್ರವಾಹದ ನೀರಿನಲ್ಲಿಯೇ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಹೆಸ್ಕಾಂ ಸಿಬ್ಬಂದಿ ಮುಂದಾಗಿದ್ದಾರೆ. ಮಲಪ್ರಭಾ ನದಿ ಪ್ರವಾಹದ ನೀರಿನಿಂದ ಜಮೀನುಗಳೆಲ್ಲವೂ ಜಲಾವೃತವಾಗಿವೆ.

ಅಪಾಯ ಹಂತದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಅಧಿಕಾರಿಗಳಿಂದ ಸೂಚನೆ ರವಾನೆಯಾಗಿದೆ. ಈ ಹಿನ್ನಲೆಯಲ್ಲಿ ಮಂಜುನಾಥ ಚಂದನ್ನವರ್ ಅನ್ನೋ ನರಗುಂದ ಹೆಸ್ಕಾಂ ಸಿಬ್ಬಂದಿ, ನೀರಿನಲ್ಲಿಯೇ ಈಜಿಕೊಂಡು ಟ್ರಾನ್ಸಫರ್ಮರ್ ದುರಸ್ತಿ ಮಾಡಿ ಬಂದಿದ್ದಾರೆ. ಜಮೀನಿನಲ್ಲಿರೋ ಟ್ರಾನ್ಸಫರ್ಮರ್ ವರೆಗೂ ನೀರು ತಲುಪಿದೆ. ಹೀಗಾಗಿ ಟ್ರಾನ್ಸ್‌ಫರ್ಮರ್ ನೀರಲ್ಲಿ ಮುಳುಗಿದ್ರೆ ಇತರೆ ಕಡೆಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆ ನರಗುಂದ ವಿದ್ಯುತ್ ಪ್ರಸರಣ ಉಪ ವಿಭಾಗದಿಂದ ಮುಂಜಾಗ್ರತೆ ವಹಿಸಿ ಹೆಸ್ಕಾಂ ಸಿಬ್ಬಂದಿ ಮಂಜುನಾಥ ತಮ್ಮ ಪ್ರಾಣ‌ಪಣಕ್ಕಿಟ್ಟು ಈ ಕೆಲಸ ನಿರ್ವಹಿಸಿದ್ದಾರೆ.ಸಿಬ್ಬಂದಿ ಮಂಜುನಾಥ ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Edited By : Nagesh Gaonkar
PublicNext

PublicNext

14/09/2022 05:00 pm

Cinque Terre

23.21 K

Cinque Terre

2