ಗದಗ: ಮುಂಗಾರು ಹಂಗಾಮಿನಲ್ಲಿ ನೆರೆಯಿಂದ ಬೆಳೆನಷ್ಟ ಅನುಭವಿಸಿದ್ದ ರೈತರು ಹಿಂಗಾರಿ ಬೆಳೆ ಬೆಳೆದು ಆಗಿರೋ ನಷ್ಟ ಸರಿದೂಗಿಸ್ಕೊಬೇಕು ಅನ್ನೋ ಉಮೇದಿನಲ್ಲಿದ್ದಾರೆ. ಮಳೆ ನಿಂತರೆ ಸಾಕು ಕೃಷಿ ಚಟುವಟಿಕೆ ಆರಂಭವಾಗುತ್ತೆ. ಹೀಗಾಗಿ ಮುಂಚಿತವಾಗಿ ರಸಗೊಬ್ಬರ ಸ್ಟಾಕ್ ಮಾಡ್ಕೊಳೋಣ ಅಂತ ಯೋಚನೆ ಮಾಡ್ತಿರೋ ರೈತ್ರಿಗೆ ಶಾಕ್ ಆಗಿದೆ.
ಆಗ್ರೋ ಅಂಗಡಿಗೆ ಹೋಗಿ ಡಿಎಪಿ ಬೇಕು ಅಂತ ಕೇಳುವ ರೈತರಿಗೆ, ಮತ್ತೊಂದು ರಸಗೊಬ್ಬರ ಇಲ್ಲವೇ ಔಷಧಿ ಪ್ಯಾಕೆಟ್ ಖರೀದಿ ಮಾಡ್ಬೇಕು ಅನ್ನೋ ನಿಯಮ ಮುಂದಿಡುತ್ತಿದ್ದಾರೆ. ಇದರಿಂದಾಗಿ ಮೊದಲೇ ಕಂಗಾಲಾಗಿರೋ ರೈತ್ರಿಗೆ ಗಾಯದ ಮೇಲೆ ಬರೆ ಎಳೆದ ಅನುಭವ ಆಗ್ತಿದೆ.
ನರಗುಂದದ ಗೊಬ್ಬರ ವ್ಯಾಪಾರಸ್ಥರು, ಆಗ್ರೋ ಕಂಪನಿಗಳೇ ಒತ್ತಾಯ ಪೂರ್ವಕವಾಗಿ ಗೊಬ್ಬರ ಕಳಸುತ್ತಿದ್ದಾರೆ. ಹೀಗಾಗಿ ರೈತರಿಗೆ ಒಂದರ ಜೊತೆಗೆ ಮತ್ತೊಂದನ್ನ 'ಲಿಂಕ್' ಮಾಡಿ ಕೊಡ್ತಿದಿವಿ ಅಂತಿದಾರೆ.
ಅತಿವೃಷ್ಟಿ, ನೆರೆಯಿಂದ ಗದಗ ಜಿಲ್ಲೆ ನರಗುಂದ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಅಂದಾಜಿನ ಪ್ರಕಾರ 1 ಲಕ್ಷ 70 ಸಾವಿರ ಹೆಸ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ವರದಿ ಇದೆ. ಇಂಥ ಸಂದರ್ಭದಲ್ಲಿ ಒತ್ತಾಯದಿಂದ ಮತ್ತೊಂದು ಗೊಬ್ಬರ ಅಥವಾ ಔಷಧಿ ಖರೀದಿಸಬೇಕು ಅನ್ನೋ ನಿಯಮ ಮಾಡಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ರೈತರ ಪ್ರಶ್ನೆಯಾಗಿದೆ.
PublicNext
20/09/2022 04:10 pm