ಗದಗ : ನಗರದ ಹೃದಯ ಭಾಗದಲ್ಲಿರೋ ಜವಳಗಲ್ಲಿ ವ್ಯಾಪ್ತಿಯಲ್ಲಿನ ರಾಜ ಕಾಲುವೆ ಸ್ಲ್ಯಾಬ್ ಮೇಲೆ ಉದ್ಯಾನ ನಿರ್ಮಿಸ್ತಿರೋದನ್ನ ಸ್ಥಳೀಯರು ವಿರೋಧಿಸಿದ್ರು.
ಕಾಲುವೆ ಪಕ್ಕದಲ್ಲೇ ಮನೆಗಳಿದ್ದು, ಮನೆಗಳ ರಸ್ತೆ ಬಂದ್ ಮಾಡಿ ಉದ್ಯಾನ ನಿರ್ಮಿಸಲಾಗ್ತಿದೆ. ಉದ್ಯಾನ ನಿರ್ಮಾಣವಾದ್ರೆ ಸ್ಥಳೀಯರಿಗೆ ಲಾಭಕ್ಕಿಂತ ಹೆಚ್ಚಿಗೆ ಸಮಸ್ಯೆಯಾಗುತ್ತೆ.ಮಾರ್ಕೆಟ್ ಏರಿಯಾದಿಂದ ಬರುವ ಕುಡುಕರ ಉದ್ಯಾನವನದಲ್ಲಿ ಬೀಡು ಬೀಳುವ ಸಾದ್ಯತೆ ಇದೆ. ಹೀಗಾಗಿ ಉದ್ಯಾನ ನಿರ್ಮಿಸೋದು ಬೇಡ ಅಂತಾ ಸ್ಥಳೀಯರು ವಿರೋಧಿಸುತ್ತಿದ್ದಾರೆ.
ಎಸಿಪಿ /ಎಸ್ ಟಿಪಿ ಅನುಧಾನದಲ್ಲಿ ಜುಲೈ 2021 ರಲ್ಲೇ ಕಾಮಗಾರಿಗೆ ಅನುಮೋದನೆ ಸಿಕ್ಕಿತ್ತು.ಯೋಜನೆಯಡಿ ಜವಳಗಲ್ಲಿ 17/18 ವಾರ್ಡ್ ಮಧ್ಯದ ರಾಜ ಕಾಲುವೆ ಮೇಲೆ ಉದ್ಯಾನ, ಗೌರವ ಘಟಕ, ಸಮುದಾಯ ಕಟ್ಟಡ ಕಟ್ಟಲು ಅನುಮೋದನೆ ಸಿಕ್ಕಿತ್ತು. ಯೋಜನೆಯಂತೆ ಗೌರಿ ಶಂಕರ್ ಲಾಡ್ಜ್ ನಿಂದ ಡಿಸಿ ಮಿಲ್ ವರೆಗೆ 1 ಕೋಟಿ ಅನುದಾನದಲ್ಲಿ ಉದ್ಯಾನ ಕೆಲಸ ನಡೆದಿತ್ತು. ಆದ್ರೆ, ಸ್ಥಳೀಯರ ವಿರೋಧದ ಹಿನ್ನೆಲೆ ಸ್ಥಗಿತವಾಗಿದೆ.
ನಗರಸಭೆ ಪೂರ್ವಾನುಮತಿ ಪಡೆಯದೇ ಕೆಲಸ ನಡೆದಿದೆ ಎಂದು ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಆಕ್ಷೇಪಣೆ ಸಲ್ಲಿಸಿದ್ರು. ಇದ್ರಿಂದಾಗಿ 19 ನೇ ತಾರೀಕು ಪೌರಾಯುಕ್ತ ರಮೇಶ್ ಸುಣಗಾರ, ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿ, ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ರು.ಆದ್ರೆ, ಪತ್ರಕ್ಕೆ ಕ್ಯಾರೇ ಅನ್ನದ ನಿರ್ಮಿತಿ ಕೇಂದ್ರ ಕಾಮಗಾರಿ ಮುಂದುವರೆಸಿದ್ರು.
ಸದ್ಯ ಸ್ಥಳೀಯರ ವಿರೋಧದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಂಡಿದೆ.
PublicNext
01/10/2022 10:55 am