ಗದಗ: ಗದಗ-ಬೆಟಗೇರಿ ಅವಳಿ ನಗರದ ಎಲ್ಲ ಕರದಾತರು ಖಾತಾ ಪುಸ್ತಕಗಳನ್ನು ಪಡೆದುಕೊಂಡು ನಗರದ ಅಭಿವೃದ್ಧಿಗೆ, ಪಾರದರ್ಶಕ ಆಡಳಿತಕ್ಕೆ ಸಹಕರಿಸುವಂತೆ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮನವಿ ಮಾಡಿದರು.
ನಗರಸಭೆಯ ತಮ್ಮ ಕಚೇರಿಯಲ್ಲಿ ಖಾತಾ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಹಿಂದೆ ಪುಟ್ಟರಾಜ್ ಐಟಿ ಸಂಸ್ಥೆ ವತಿಯಿಂದ ಖಾತಾ ಪುಸ್ತಕ ವಿತರಿಸಲು ಆದೇಶ ನೀಡಲಾಗಿತ್ತು.ಆದರೆ, ಕೊರೊನಾ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರಿಗೆ ಖಾತಾ ಪುಸ್ತಕಗಳನ್ನು ವಿತರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೊರೊನಾ ದೂರವಾಗಿದ್ದು ಪುಟ್ಟರಾಜ ಐಟಿ ಸಂಸ್ಥೆಯವರು ಖಾತಾ ಪುಸ್ತಕಗಳನ್ನು ವಿತರಿಸಲು ಮುಂದೆ ಬಂದಿದ್ದು, ಪ್ರತಿಯೊಬ್ಬ ಕರದಾತರು ಪಡೆದುಕೊಳ್ಳಬೇಕು ಎಂದರು.
ಇದರಿಂದ ನಗರಸಭೆಗೆ ತುಂಬುತ್ತಿರುವ ತೆರಿಗೆ ಪಾರದರ್ಶಕವಾಗಿರಲಿದೆ. ಅಲ್ಲದೇ, ಕರದಾತರು ತಾವು ತುಂಬಿರುವ ತೆರಿಗೆಯನ್ನು ತಮ್ಮ ಅಂಗೈಯಲ್ಲೇ ಕಿರು ಪುಸ್ತಕದೊಳಗೆ ನೋಡಿಕೊಳ್ಳಬಹುದಾಗಿದೆ. ಜೊತೆಗೆ ಆಸ್ತಿ ಮಾಲೀಕರು ತಮ್ಮ ಆಸ್ತಿಯ ಕರ ಹಾಗೂ ನಗರಸಭೆಯ ವಿವಿಧ ಕರಗಳನ್ನು ಖಾತಾ ಪುಸ್ತಕದಲ್ಲಿ ನಮೂದಿಸಿಕೊಳ್ಳಬಹುದಾಗಿದೆ. ಹೀಗಾಗಿ ಅವಳಿ ನಗರದ ವ್ಯಾಪ್ತಿಯಲ್ಲಿ ಬರುವ ಕರದಾತರು ಖಾತಾ ಪುಸ್ತಕದ ಪ್ರಯೋಜನ ಪಡೆದುಕೊಳ್ಳಬೇಕು. ಇದಕ್ಕೆ ನಗರಸಭೆಯ ಎಲ್ಲ ಸದಸ್ಯರೂ ಸಹಕರಿಸಬೇಕು ಎಂದು ಉಷಾ ದಾಸರ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮುತ್ತಣ್ಣ ಮುಶಿಗೇರಿ, ಶೈಲಾ ಬಾಕಳೆ, ಬಯಲು ಸೀಮೆ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಸುಧೀರ್ ಕಾಟೇಗಾರ್, ನಗರಸಭೆ ಪ್ರಭಾರಿ ಪೌರಾಯುಕ್ತರಾದ ಸಂಕನಗೌಡರ, ಇಂಜನೀಯರ್ ವಿ.ಪಿ.ಕಾಟೇವಾಲ್
ಇದ್ದರು.
Kshetra Samachara
17/09/2022 08:27 pm