ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಉತ್ತರದ ಭಾಗದ ದ್ವಾರ ಬಾಗಿಲಿನಲ್ಲಿರುವ ಮಂಟಪ ಹಾಗೂ ದೇವಸ್ಥಾನದ ಪಶ್ಚಿಮ ಭಾಗದಲ್ಲಿ ಇರುವ ಕಂಪೌಂಡ ಸಹಿತ ಕುಸಿದಿದ್ದು ಭಕ್ತರು, ಸಾರ್ವಜನಿಕರು ಆತಂಕ ಪಡುವಂತಾಗಿದೆ.
ಹೌದು ! ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನವು ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದು ಈ ದೇವಸ್ಥಾನವು ಪ್ರವಾಸಿ ತಾಣವಾಗಿದೆ. ಹಿಂದೆ 5 ಕೋಟಿ ವೆಚ್ಚದಲ್ಲಿ ಇನ್ಪೋಸಿಸ್ ಸಂಸ್ಥೆಯ ಡಾ.ಸುಧಾಮೂರ್ತಿ ಅವರು ದೇವಸ್ಥಾನವನ್ನು ಜಿರ್ಣೋದ್ಧಾರ ಮಾಡಿ ದೇವಸ್ಥಾನದ ಮೆರೆಗು ಹೆಚ್ಚಿಸಿದ್ದರು, ಆ ಸಮಯದಲ್ಲಿ ಸುಧಾಮೂರ್ತಿ ಅವರು ಪಟ್ಟಣದ ಜನತೆಗೆ ಉತ್ತರ ಭಾಗದ ದ್ವಾರ ಬಾಗಿಲವನ್ನು ದುರಸ್ಥಿಗೊಳಿಸಲು ತಿಳಿಸಿದ್ದರು. ಆದರೆ ಜನರು ಆ ಕೆಲಸಕ್ಕೆ ಕೈ ಹಾಕದ ಕಾರಣ ಈಗ ಸತತವಾಗಿ ಸುರಿದ ಮಳೆಗೆ ಆ ಗೋಡೆ ಹಾಗೂ ಮಂಟಪ ಶೀತಲಗೊಂಡು ಕುಸಿತಗೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದರು.
PublicNext
16/09/2022 03:31 pm