ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮಹಾರಾಷ್ಟ್ರ ಮುದ್ರಿತ ಟಿಕೆಟ್ ವಿತರಣೆ: ಕನ್ನಡ‌ ಪರ ಸಂಘಟನೆಗಳ ಪ್ರತಿಭಟನೆ

ಗದಗ: ಜೈ ಮಹಾರಾಷ್ಟ್ರ ಮುದ್ರಿತ ಟಿಕೆಟ್ ವಿತರಣೆ. ಟಿಕೆಟ್ ಪ್ರದರ್ಶಿಸುವ ಮೂಲಕ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ. ಸರ್ಕಾರದ ವಿರುದ್ಧ ಧಿಕ್ಕಾರ. ಟಿಕೆಟ್ ವಿತರಿಸಿದ ಇಲಾಖೆ ಅಧಿಕಾರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹ.

ಹೌದು ಪ್ರತಿಭಟನೆ ನಡೆದಿರೋದು ಗದಗ ನಗರದ ಹಳೇ ಬಸ್ ನಿಲ್ದಾಣದಲ್ಲಿ. ಗದಗ ನಗರ ನಿವಾಸಿಗಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇಂದು ಟಿಕೆಟ್ ಪಡೆದಾಗ ಅಚ್ಚರಿ ಕಾದಿತ್ತು. ಯಾಕಂದ್ರೆ ಜೈ ಮಹಾರಾಷ್ಟ್ರ, ಮರಾಠ ಎಂದು ನಮೂದಾಗಿದ್ದನ್ನು ಕಂಡ ಜನರು ದಂಗಾಗಿದ್ದರು. ಈ ವಿಷಯ ತಿಳಿಯುತಿದ್ದಂತೆ ಕನ್ನಡ ಸಂಘಟನೆಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿದ್ದಾರೆ.

ಇನ್ನು ಘಟನೆ ಬೆಳಕಿಗೆ ಬರ್ತಿದ್ದಂತೆ ಸಾರಿಗೆ ಇಲಾಖೆ ಸಿಬ್ಬಂದಿಗಳು ವಿಚಲಿತರಾಗಿದ್ದಾರೆ. ಸ್ಥಳೀಯ ಡಿಪೋ ಕಂಟ್ರೋಲರ್ ಅವರಿಗೆ ಏನು ಮಾಡಬೇಕೆಂದು ತಿಳಿಯದಂತಾಗಿ ಮೇಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಇಲಾಖೆಯ ಸ್ಟೋರ್ ರೂಮ್‌ನಲ್ಲಿ ಇರುವ ಟಿಕೆಟ್ ರೂಲ್ ಬಾಕ್ಸ್‌ಗಳನ್ನು ತಡಕಾಡಿದ್ದಾರೆ. ಇದ್ದ ಹತ್ತಾರು ಬಾಕ್ಸ್‌ಗಳಲ್ಲಿ ಒಂದು ಮಹಾರಾಷ್ಟ್ರ ಸಾರಿಗೆ ಇಲಾಖೆಗೆ ಸಂಬಂಧಿಸಿದ ಬಾಕ್ಸ್ ಆಗಿತ್ತು. ಇದನ್ನರಿತ ಅಧಿಕಾರಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾರಿಗೆ ಇಲಾಖೆಗಳಿಗೆ ಆಂಧ್ರ ಮೂಲದ ಖಾಸಗಿ ಕಂಪನಿಯೊಂದು ಟಿಕೆಟ್ ರೋಲ್ ಮುದ್ರಿಸಿ ಪೂರೈಕೆ ಮಾಡುತ್ತದೆ. ಅದರಲ್ಲಿ ಮಹಾರಾಷ್ಟ್ರಕ್ಕೆ ಪೂರೈಕೆ ಆಗಬೇಕಿದ್ದ ಬಾಕ್ಸ್‌ನಲ್ಲಿ ಒಂದು ಬಾಕ್ಸ್ ಗದಗ ನಗರಕ್ಕೆ ಪೂರೈಕೆ ಆಗಿದೆ ಅಂತ ಸ್ಪಷ್ಟೀಕರಣ ಕೊಟ್ಟರು.

ಸಾರಿಗೆ ಇಲಾಖೆ ಈ ಬಗ್ಗೆ ಮುಂಜಾಗ್ರತೆ ವಹಿಸಲೇಬೇಕು. ಯಾಕಂದ್ರೆ, ತಮ್ಮ ನಿರ್ಲಕ್ಷ್ಯದಿಂದ ಕನ್ನಡಕ್ಕೆ ಧಕ್ಕೆ ಬರುವಂತ ವಾತಾವರಣಕ್ಕೆ ಕಾರಣಕರ್ತರಾಗಬಾರದು. ಕನ್ನಡವೇ ನಮ್ಮ ಮೊದಲ ಆದ್ಯತೆ ಮತ್ತು ಬದ್ಧತೆ ಆಗಿರಬೇಕು ಎಂಬುದೇ ನಮ್ಮ ಆಶಯ.

Edited By :
PublicNext

PublicNext

05/10/2022 08:21 pm

Cinque Terre

34.14 K

Cinque Terre

2

ಸಂಬಂಧಿತ ಸುದ್ದಿ