ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಸುನೀಗಿದ ರಾಸುವಿನ ಶವ ಇಟ್ಟು ರೈತರ ಪ್ರತಿಭಟನೆ

ಗದಗ: ಚರ್ಮ ಗಂಟು ರೋಗದಿಂದ ಅಸುನೀಗಿದ ರಾಸುವಿನ ಶವವನ್ನು ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಎದುರು ಇಟ್ಟು ರೈತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಲಕ್ಷ್ಮೇಶ್ವರ ಕದರಗೇರಿ ಓಣಿಯ ಗಂಗಪ್ಪ ಯಲ್ಲಪ್ಪ ಗಿಡಿಬಿಡಿ ಎಂಬುವರ ಎತ್ತು ಸಾವನ್ನಪ್ಪಿತ್ತು. ಅದರ ಅಂತ್ಯಸಂಸ್ಕಾರ ಮಾಡಲು ಪುರಸಭೆಯವರಿಗೆ ಕರೆ ಮಾಡಿದಾಗ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ನೂರಾರು ರೈತರು ಬೆಳ್ಳಂಬೆಳಿಗ್ಗೆ ಪುರಸಭೆ ಮುಂದೆ ಎತ್ತಿನ ಕಳೇಬರ ಇಟ್ಟು ಪ್ರತಿಭಟನೆ ಮಾಡಿದರು.

ರೈತರು ಪಶು ವೈದ್ಯರಿಗೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ದಿಕ್ಕಾರ ಕೂಗುತ್ತ ಕೆಲ ಕಾಲ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಾಧಿಕಾರಿ ಡಾ, "ನೀಲಕಂಠ ಹವಳದ ಅವರನ್ನು ರೈತರುತರಾಟೆ ತೆಗೆದುಕೊಂಡರು. ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎತ್ತಿನ ಅಂತ್ಯಕ್ರಿಯೆ ಮಾಡಲು ಜಿಸಿಬಿ ಯಂತ್ರವನ್ನು ಕಳಿಸಕೊಟ್ಟಿದ್ದಾರೆ. ಆ ನಂತರವಷ್ಟೇ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.

Edited By :
PublicNext

PublicNext

06/10/2022 10:06 pm

Cinque Terre

32.49 K

Cinque Terre

1

ಸಂಬಂಧಿತ ಸುದ್ದಿ