ಗದಗ: ರಾಜ್ಯಾದ್ಯಂತ NIA ದಾಳಿ ಮುಂದುವರೆಸಿದ್ದು, ಗದಗ ಜಿಲ್ಲೆಯಲ್ಲೂ ಇಬ್ಬರು PFI ಸಂಘಟಕರನ್ನು ಬಂಧಿಸಲಾಗಿದೆ.
ಗದಗ ರೆಹಮತ್ ನಗರದ ನಿವಾಸಿಗಳಾದ ರುಸ್ತುಮ್ ದಂಡಿನ್ (22) ಹಾಗೂ ಸರ್ಫರಾಜ್ ಗೌಂಡಿ(24) ಬಂಧಿತರು. ಸರ್ಫರಾಜ್ ಮೆಕ್ಯಾನಿಕ್ ಆಗಿದ್ದು ರುಸ್ತುಮ್ ಫ್ಲಂಬರ್ ಕಾರ್ಮಿಕನಾಗಿದ್ದಾನೆ. ಇವರು ಹುಬ್ಬಳ್ಳಿಯಲ್ಲಿ ನಡೆದ ಎನ್‌ಆರ್‌ಸಿ ಹಾಗೂ ಸಿಎಎ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಅಲ್ಲದೆ ಹುಬ್ಬಳ್ಳಿ ಕೌಲಬಜಾರ್ ಹಾಗೂ ಕಾಟನಪೇಟೆ ಪೊಲೀಸ್ ಠಾಣೆ ಪ್ರತಿಭಟನೆಯಲ್ಲಿಯೂ ಸಹ ಭಾಗಿಯಾಗಿದ್ರು ಎಂದು ತಿಳಿದು ಬಂದಿದೆ. ಇಬ್ಬರೂ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರೋ ಆರೋಪ ಕೇಳಿ ಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
27/09/2022 11:57 am