", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/405356-1736484645-bada.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನರಗುಂದ: ನರಗುಂದ ತಾಲ್ಲೂಕಿನ ಹುಣಶೀಕಟ್ಟಿ ಗ್ರಾಮದ ಶಿವಪ್ಪ ಮಹದೇವಪ್ಪ ಹಡಪದ ಎಂಬವರ ಎಮ್ಮೆ ಇಂದು ಸಂಜೆ ಮೇಯಲು ಹೋದಾಗ ನರಗುಂದ ಪಟ್ಟಣದ ಜೆ.ಟಿ.ಟಿ...Read more" } ", "keywords": "Nargund News, Manhole Rescue, Elephant Rescue, Fire Brigade Heroes, Karnataka Animal Rescue, Nargund District News, Animal Protection, Wildlife Rescue, Heroic Act,Gadag,Human-Stories", "url": "https://publicnext.com/article/nid/Gadag/Human-Stories" }
ನರಗುಂದ: ನರಗುಂದ ತಾಲ್ಲೂಕಿನ ಹುಣಶೀಕಟ್ಟಿ ಗ್ರಾಮದ ಶಿವಪ್ಪ ಮಹದೇವಪ್ಪ ಹಡಪದ ಎಂಬವರ ಎಮ್ಮೆ ಇಂದು ಸಂಜೆ ಮೇಯಲು ಹೋದಾಗ ನರಗುಂದ ಪಟ್ಟಣದ ಜೆ.ಟಿ.ಟಿ.ಸಿ. ಕಾಲೇಜು ಆವರಣದಲ್ಲಿನ ಮ್ಯಾನ್ ಹೋಲ್ ನಲ್ಲಿ ಬಿದ್ದು ನರಳಾಡುತ್ತಿತ್ತು. ಕೆಲ ಗಂಟೆಗಳ ವರೆಗೆ ಕಾಲೇಜು ವಿದ್ಯಾರ್ಥಿಗಳು ಪ್ರಯತ್ನ ಪಟ್ಟರೂ ಎಮ್ಮೆಯನ್ನು ಹೊರ ತೆಗೆಯಲು ಸಾಧ್ಯವಾಗದೆ ಇದ್ದ ಕಾರಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಎಮ್ಮೆಯ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ.
ಸಿಬ್ಬಂದಿ ಶಿವಾನಂದ ಉಳ್ಳಾಗಡ್ಡಿ, ಬಿ.ಎಲ್. ಕುಂಚಗನೂರ , ಟಿ.ವಾಯ್ ಕರಾಡೆ,ಎಚ್. ಎಲ್. ಸಂತೋಷ , ಎಮ್. ಬಿ. ಬಾವಾಖಾನವರ, ಬಿ.ಎಸ್. ಕರಡಿಗುಡ್ಡ ,ಎಮ್.ಟಿ., ಎಸ್ ಎಸ್ ಬೇಪಾರಿ ಅವರು ಸೇರಿ ಎಮ್ಮೆಯನ್ನು ಜೀವಂತವಾಗಿ ರಕ್ಷಣೆ ಮಾಡಿದ್ದಾರೆ. ಅದರಲ್ಲೂ ಟಿ.ವಾಯ್ ಕರಾಡೆ ಅವರು ಮ್ಯಾನ್ ಹೋಲ್ ಎನ್ನುವುದು ಲೆಕ್ಕಿಸದೆ ಅದರ ಒಳಗೆ ಸಾಹಸ ಪಟ್ಟುಇಳಿದು ಮಾನವೀಯತೆಯ ಕಾರ್ಯ ಮಾಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಒಟ್ಟಿನಲ್ಲಿ ಎಮ್ಮೆ ರಕ್ಷಣೆ ಮಾಡುವಲ್ಲಿ ನಮ್ಮ ನರಗುಂದ ಅಗ್ನಿಶಾಮಕ ದಳದ ಹೀರೋಗಳು ಯಶಸ್ವಿಯಾದರು.
ವರದಿ -ಮಲ್ಲಿಕಾರ್ಜುನ , ಪಬ್ಲಿಕ್ ನೆಕ್ಸ್ಟ್ ,ನರಗುಂದ
PublicNext
10/01/2025 10:21 am