ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ:ಕಾಲಮಿತಿಯೊಳಗೆ ಜನರ ಕೆಲಸ ಮಾಡಿಕೊಡಿ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಸೂಚನೆ

ಗದಗ: ಕಂದಾಯ ವಿಭಾಗದ ಸಿಬ್ಬಂದಿಗಳು ಜಿಲ್ಲಾಡಳಿತ ಸೂಚಿಸಿದ ಸರ್ವೇ ಹಾಗೂ ಇತರ ಕಾರ್ಯವನ್ನು ನಿಗದಿತ ಸಮಯದಲ್ಲಿ ಮುಗಿಸಿ‌ ಸಾರ್ವಜನಿಕರನ್ನು ಅಲೆದಾಡಿಸದೇ ವಿಳಂಬ ಮಾಡದೇ ಕೆಲಸ ಮಾಡಿಕೊಡಬೇಕು ಎಂದು ಗದಗ-ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಸಭಾಭವನದಲ್ಲಿ ಜರುಗಿದ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿನಿತ್ಯ ಮಾಲಿಗಳು ಹಾಗೂ ಸಂಘ ಸಂಸ್ಥೆಗಳು ತಮಗೆ ಸಂಬಂಧಿಸಿದ ಉದ್ಯಾನವನಗಳ ನಿರ್ವಹಣೆ,ಮೇಲುಸ್ತುವಾರಿ ಮಾಡಿದ ಮೇಲೆಯೇ ತಿಂಗಳ ವೇತನಾನುದಾನ ಬಿಡುಗಡೆ ಮಾಡಬೇಕು.ಯಾವುದೇ ಸಾಮಗ್ರಿಗಳು ಖರೀದಿ ಅತೀ ಅವಶ್ಯವಿರುವ ಸಂದರ್ಭದಲ್ಲಿ ಮಾತ್ರ ಕೆಪಿಟಿಪಿ ಕಾಯ್ದೆ 1964ರ ಅಧಿನಿಯಮದ ಪ್ರಕಾರ ಕೊಟೇಶನ್ ಮಾಡಲು ಮಾತ್ರ ಅವಕಾಶ ಕೊಡಬೇಕು.ಇಲ್ಲದ ವೇಳೆ ಕಡ್ಡಾಯವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿ ಕೊಟೇಶನ್ ಸಲ್ಲಿಕೆ ತಿಳಿಸಬೇಕು ಎಂದರು.

ಅವಳಿ ನಗರದ ರಾಜಕಾಲುವೆ ಹಾಗೂ ದೊಡ್ಡ ಚರಂಡಿಗಳನ್ನು ಸ್ವಚ್ಚಗೊಳಿಸಲು ಹೊರಗುತ್ತಿಗೆ ಆಧಾರದ ಮೇಲೆ ಒಂದು ತಿಂಗಳ ಅವಧಿಯವರೆಗೆ ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಮೂಲಕ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಸ್ವಚ್ಚಗೊಳಿಸಬೇಕು.ಈಗಾಗಲೇ ಕಾರ್ಯನಿರ್ವಹಣೆ ಮಾಡುತ್ತಿರುವ ಪೌರ ಕಾರ್ಮಿಕರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ತಮಗೆ ಸಂಬಂಧಿಸಿದ ಭಾಗಗಳ ಸ್ವಚ್ಚತಾ ಕಾರ್ಯಕ್ಕೆ ಸಮಯ ನೀಡಿ ಸೌಂದರ್ಯೀಕರಣಕ್ಕಾಗಿ ಶ್ರಮಿಸಬೇಕು

ಎಂದು ಸೂಚಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರಾದ ಪ್ರಕಾಶ ಅಂಗಡಿ, ನಾಗರಾಜ ತಳವಾರ, ಮುತ್ತಣ್ಣ ಮುಶಿಗೇರಿ, ಲಕ್ಷ್ಮೀ ಕಾಕಿ, ಶೈಲಾ ಬಾಕಳೆ, ಹುಲಿಗೆಮ್ಮ ಹಬೀಬ, ಜೈನುಲಾಬ್ದಿನ್ ನಮಾಜಿ, ಲಕ್ಷ್ಮೀ ಸಿದ್ದಮ್ಮನಹಳ್ಳಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಪ್ರಭಾರಿ ಪೌರಾಯುಕ್ತರಾದ ಸಂಕನಗೌರ ಸ್ವಾಗತಿಸಿದರು.

Edited By : Nagaraj Tulugeri
PublicNext

PublicNext

17/09/2022 08:22 pm

Cinque Terre

17.21 K

Cinque Terre

0