", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/378325-1736583528-5.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಹೂವಿನ ಶಿಗ್ಲಿ ವಿರಕ್ತಮಠದ ಸಂಕ್ರಾಂತಿ ಸಂಭ್ರಮ 2025 ಹಾಗೂ 46 ನೇ ಜಾತ್ರಾ ಮಹೋತ್ಸವ ಲಿಂ.ನಿರಂಜನ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ದಿ...Read more" } ", "keywords": ",Gadag,Cultural-Activity", "url": "https://publicnext.com/article/nid/Gadag/Cultural-Activity" }
ಗದಗ: ಹೂವಿನ ಶಿಗ್ಲಿ ವಿರಕ್ತಮಠದ ಸಂಕ್ರಾಂತಿ ಸಂಭ್ರಮ 2025 ಹಾಗೂ 46 ನೇ ಜಾತ್ರಾ ಮಹೋತ್ಸವ ಲಿಂ.ನಿರಂಜನ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ದಿ.13 ರಿಂದ 15 ರವರೆಗೆ ಜರುಗಲಿದ್ದು ಗ್ರಾಮದಲ್ಲಿ ಈಗಾಗಲೇ ಸಂಕ್ರಮಣದ ಸಂಭ್ರಮ ಹಬ್ಬದ ವಿಶೇಷ ಮೆರಗು ಜನರಲ್ಲಿ ಮನೆ ಮಾಡಿದೆ.
ಗ್ರಾಮದಲ್ಲಿ ಜಾತ್ರೆಗೆ ಬರುವ ಭಕ್ತಗಣ ಸಮೂಹಕ್ಕೆ ಸಿಹಿಯೊಂದಿಗೆ ಶ್ರೀಮಠದ ವಿಶೇಷವಾದ ಬಿಳಿ ಜೋಳದ ರೊಟ್ಟಿ ಮತ್ತು ಕರಂಡಿ ಭಕ್ತಾದಿಗಳಿಗೆ ವಿಶೇಷ ಆತಿಥ್ಯ ನೀಡಲು ಸಜ್ಜಾಗಿದೆ. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ವಿರಕ್ತಮಠದ ಶ್ರೀಗಳವರ ಭವ್ಯ ಮೆರವಣಿಗೆಯೊಂದಿಗೆ ಅಲಂಕಾರಗೊಂಡ ಚಕ್ಕಡಿಗಳಲ್ಲಿ ಗ್ರಾಮದ ಮನೆ ಮನೆಯಲ್ಲಿ ಸಂಗ್ರಹಿಸಿದ ಖಡಕ್ ರೊಟ್ಟಿಗಳನ್ನು ಹೊತ್ತ ಚಕ್ಕಡಿಗಳ ಮೆರವಣಿಗೆ ಒಂದು ಕಡೆಯಾದರೆ ನೂರಾರು ಮಹಿಳೆಯರು ತಾವೇ ಸಿದ್ಧಪಡಿಸಿದ ರೊಟ್ಟಿಗಳನ್ನು ತಲೆಯ ಮೇಲೆ ಹೊತ್ತು ಧನ್ಯತಾಭಾವದೊಂದಿಗೆ ಶ್ರೀಮಠಕ್ಕೆ ಬಂದು ಶ್ರೀಗಳವರೆಗೆ ಸಮರ್ಪಿಸಿದರು.
ಗ್ರಾಮದ ಪ್ರತಿ ಕುಟುಂಬದವರು ಶ್ರೀಮಠದ ಸಂಕ್ರಾಂತಿ ಜಾತ್ರೆಗಾಗಿ ವಿಧವಿಧವಾದ ಕರಂಡಿಗಳನ್ನು ಅಂದರೆ ಸೌತೆಕಾಯಿ, ಬದನೆಕಾಯಿ, ಟೊಮೇಟೊ ಕಾಯಿ, ಹಸಿ ಮೆಣಸಿನಕಾಯಿ ಹೀಗೆ ವಿಧವಿಧವಾದ ಕರಂಡಿಗಳ ಕಡಿಗೆಗಳನ್ನು ಸಿದ್ಧಪಡಿಸಿದ್ದು ಬನ್ನಿ.. ಹೂವಿನ ಶಿಗ್ಲಿ ವಿರಕ್ತಮಠದ ಸಂಕ್ರಾಂತಿಗೆ ಬಂದು ಖಡಕ್ ರೊಟ್ಟಿ ಕರಂಡಿ ಸವಿದು ಶ್ರೀಮಠದ ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗೋಣ .
PublicNext
11/01/2025 01:48 pm