ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ನಿರಂತರ ಮಳೆ ಮನೆ ಕುಸಿದು ವೃದ್ಧೆ ಸಾವು : ಇಬ್ಬರ ಸ್ಥಿತಿ ಚಿಂತಾಜನಕ

ಗದಗ : ನಿರಂತರ ಮಳೆಯಿಂದಾಗಿ ಮನೆ ಕುಸಿತಗೊಂಡು,ಓರ್ವ ವೃದ್ದೆ ಸಾವನ್ನಪ್ಪಿ ಇಬ್ಬರ ಸ್ಥಿತಿ ಗಂಭೀರವಾಗಿರೋ ಘಟನೆ ಗದಗನ ಬೆಟಗೇರಿ ಕನ್ಯಾಳ ಅಗಸಿ ಬಳಿ ನಡೆದಿದೆ.

ಶಿವಬಸಮ್ಮ ಅಡವಯ್ಯ ಕಲ್ಮಠ (60) ಮೃತ ವೃದ್ಧೆಯಾಗಿದ್ದು, ಅಡವಯ್ಯ ಕಲ್ಮಠ ಹಾಗೂ ಬಸಮ್ಮ ಬಸಯ್ಯ ನಡಕಟ್ಟಿ ಎಂಬುವರ ಸ್ಥಿತಿ ಗಂಭೀರವಾಗಿದೆ. ಮೃತ ಹಾಗೂ ಗಾಯಾಳು ರೋಣ ತಾಲೂಕಿನ ಅಸೂಟಿ ಗ್ರಾಮದ ನಿವಾಸಿಗಳಾಗಿದ್ದು,ಬೆಟಗೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ರು.

ಮಣ್ಣಿನಡಿ ಸಿಲುಕಿದವರ ರಕ್ಷಣೆ ಮಾಡಲಾಗಿದ್ದು,ಗಂಭೀರ ಸ್ಥಿತಿಯಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ನಿರಂತರ ಮಳೆಯಿಂದಾಗಿ ಮಣ್ಣಿನ ಮನೆ ಕುಸಿದ ಪರಿಣಾಮ ಬೆಳಗಿನ ಜಾವ ಈ ದುರ್ಘಟನೆ ಜರುಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು, ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯ ಜರುಗಿದೆ.

ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಗದಗನ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Edited By : Shivu K
PublicNext

PublicNext

13/10/2022 11:40 am

Cinque Terre

31.57 K

Cinque Terre

0