ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ನರಗುಂದ ಕೊಲೆ ಕೇಸ್‌; ಇಬ್ಬರು ಅರೆಸ್ಟ್

ಗದಗ: ಗದಗ ಜಿಲ್ಲೆಯ ನರಗುಂದ ತಾಲೂಕು ಗುರ್ಲಕಟ್ಟಿ ಗ್ರಾಮದಲ್ಲಿ ಸೆ.19 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.19 ಸಂಜೆ 4 ಗಂಟೆಗೆ ನಡೆದ ಸಂಗನಗೌಡ ನಾಯ್ಕನೂರ ಕೊಲೆ ಸಂಬಂಧ ಆತನ ಪತ್ನಿ ನೀಡಿದ ದೂರಿನನ್ವಯ ಅದೇ ಗ್ರಾಮದ ಸುರೇಶಗೌಡ ಪಾಟೀಲ (30) ಹಾಗೂ ಉಮೇಶ ಅಂತಕ್ಕನವರ (25) ಎಂಬುವರನ್ನು ಬಂಧಿಸಲಾಗಿದೆ. ಈ ಕೊಲೆ ಪ್ರಕರಣ ಬೇಧಿಸಲು ಡಿವೈಎಸ್‌ಪಿ ವೈ.ಎಸ್.ಏಗನಗೌಡ್ರ ಮಾರ್ಗದರ್ಶನದಲ್ಲಿ ನರಗುಂದ ಠಾಣೆಯ ಸಿಪಿಐ ಮಲ್ಲಯ್ಯ ಮಠಪತಿ ನೇತೃತ್ವದ ತಂಡ ರಚಿಸಲಾಗಿತ್ತು. 24 ಗಂಟೆಯೊಳಗಾಗಿ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಿದ ಚಾಕು, ಟಂಟಂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕೊಲೆಗೆ ಹಣಕಾಸಿನ ವ್ಯವಹಾರ ಕಾರಣ ಎನ್ನುವದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸ್ಥಾನಿಕ ತನಿಖೆ ವೇಳೆ ಕೊಲೆಯಾದ ಸಂಗನಗೌಡ ಪತ್ನಿ ಹಾಗೂ ಆರೋಪಿ ಸುರೇಶಗೌಡ ಮಧ್ಯೆ ಸಂಬಂಧ ಇತ್ತು. ಈ ಸಂಬಂಧ ಗ್ರಾಮದಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯಿತಿ ನಡೆದಿತ್ತು. ಆದರೆ ಕೊಲೆಗೆ ಸ್ಪಷ್ಟ ಕಾರಣ ಏನು ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ.

ಅಲ್ಲದೇ ಗುರ್ಲಕಟ್ಟಿ ಗ್ರಾಮ ಪಂಚಾಯತಿ ಎದುರು ಕೊಲೆ ನಡೆದರೂ ಯಾರೊಬ್ಬರೂ ನೆರವಿಗೆ ಬಾರದೇ ಇರುವುದು ಮತ್ತು ಮೃತನ ಅಂತ್ಯಸಂಸ್ಕಾರದಲ್ಲಿಯೂ ಗ್ರಾಮಸ್ಥರು ಭಾಗಿಯಾಗದೇ ಇರುವ ಬಗ್ಗೆ ತನಿಖೆ ನಡೆಸಲಾಗುವುದು. ಮೃತ ಸಂಗನಗೌಡ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿದರು.

Edited By : Manjunath H D
PublicNext

PublicNext

24/09/2022 09:11 am

Cinque Terre

27.22 K

Cinque Terre

0

ಸಂಬಂಧಿತ ಸುದ್ದಿ