ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬಂಗಾರ ಕದ್ದರೆಂದು ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು: ತಪ್ಪಿಲ್ಲವೆಂದು ಗೊತ್ತಾದಾಗ ಬಿಟ್ಟು ಕಳಿಸಿದರು

ಗದಗ: ಬಂಗಾರ ಕಳ್ಳತನ ಮಾಡಿದ್ದೀರಿ ಅಂತ ಮೂವರು ಯುವಕರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಗದಗ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ನಡೆದಿದೆ.

ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಕಳಕಪ್ಪ ಹಡಪದ, ಮಂಜುನಾಥ ಗುಡಿಗೇರಿ, ನಾಗರಾಜ ಬೂದುಗುಂಪ್ಪ ಎಂಬ ಯುವಕರೇ ಪೊಲಿಸರಿಂದ ಥಳಿತಕ್ಕೊಳಗಾದವರು. ನಿನ್ನೆ ಸಾಯಂಕಾಲ ಗ್ರಾಮದಿಂದ ಅವರನ್ನ ಕರೆದ್ಯೊಯ್ದು, ಫೈಬರ್ ಪೈಪ್ ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದೇಹದ ವಿವಿಧ ಭಾಗಗಳಲ್ಲಿ ಬಾಸುಂಡೆ ಬರುವ ರೀತಿಯಲ್ಲಿ ಹೊಡೆದಿರೋ ಹಿನ್ನೆಲೆ ಯುವಕರು ಜರ್ಜರಿತರಾಗಿದ್ದಾರೆ. ಪೊಲೀಸರ ಹೊಡೆತಕ್ಕೆ ಯುವಕರು ನರಳಾಡುತ್ತಿದ್ದಾರೆ. ನಂತರ ಅವರು ನಿರಪರಾಧಿಗಳೆಂದು ಗೊತ್ತಾದ ತಕ್ಷಣ ಯಾರಿಗೂ ಹೇಳಬೇಡಿ ಅಂತ ಕನಿಷ್ಠಪಕ್ಷ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸದೆ ಮಾನವೀಯತೆಯನ್ನೂ ಸಹ ಮರೆತು ಅವರನ್ನು ಬಿಟ್ಟು ಕಳಿಸಿದ್ದಾರೆ.

ಇನ್ನು ಪೊಲೀಸರು ತಮ್ಮ ಗ್ರಾಮೀಣ ಠಾಣೆಗೆ ಕರೆದೊಯ್ಯದೇ ಬಿಂಕದಕಟ್ಟಿ ಗ್ರಾಮದ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿ, ಮನಸ್ಸೋ ಇಚ್ಚೆ ಥಳಿಸಿದ್ದಾರೆಂದು ಗದಗ ಗ್ರಾಮೀಣ ಪೊಲೀಸರ ವಿರುದ್ಧ ಯುವಕರು ಆರೋಪಿಸಿದ್ದಾರೆ.ಪೊಲೀಸರ ಅಮಾನವೀಯ ವರ್ತನೆಗೆ ತಿಮ್ಮಾಪುರ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು,ಗದಗ ಎಸ್ಪಿ ಶಿವಪ್ರಕಾಶ ದೇವರಾಜು ಈ ಪ್ರಕರಣದ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Edited By : Nagesh Gaonkar
PublicNext

PublicNext

22/09/2022 04:37 pm

Cinque Terre

30.4 K

Cinque Terre

2

ಸಂಬಂಧಿತ ಸುದ್ದಿ