ಲಕ್ಷ್ಮೇಶ್ವರ: ನಗರದ ಉಗ್ರಾಣ ನಿಗಮದವರು ಸುಮಾರು 7 ವರ್ಷದಿಂದ ಪುರಸಭೆ ತೆರಿಗೆಯನ್ನು ಪಾವತಿಸದ ಹಿನ್ನೆಲೆಯಲ್ಲಿ ಇಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ಅಂತಹ ಉಗ್ರಾಣಗಳನ್ನು ಸೀಜ್ ಮಾಡುವ ಮೂಲಕ ತೆರಿಗೆ ಪಾವತಿಸದವರ ಮೇಲೆ ಕಠಿಣ ಕ್ರಮ ಕೈಗೊಂಡರು.
ಹೌದು.... ಉಗ್ರಾಣ ನಿಗಮದವರಿಗೆ ಪುರಸಭೆಗೆ ತೆರಿಗೆ ಕಟ್ಟುವಂತೆ 3,4 ಬಾರಿ ನೋಟಿಸ್ ಕಳುಹಿಸಿದರೂ ಸಹ ಅವರು ತೆರಿಗೆ ಕಟ್ಟದೇ ಇರುವುದರಿಂದ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇಂದು ಉಗ್ರಾಣಗಳನ್ನು ಸೀಜ್ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಮ್ಯಾನೇಜರ್ ಮಂಜುಳಾ ಹೂಗಾರ್, ಹನುಮಂತಪ್ಪ ನಂದೆಣ್ಣವರ, ಧರ್ಮಣ್ಣ ಪವಾರ್, ಉಮಾ ಬೆಳ್ಳಗಿ, ಸೇರಿದಂತೆ ಉಗ್ರಾಣ ನಿಗಮದ ಸಿಬ್ಬಂದಿಗಳು ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ಗೌರೀಶ ನಾಗಶೆಟ್ಟಿ, ಪಬ್ಲಿಕ್ ನೆಕ್ಸ್ಟ್, ಲಕ್ಷ್ಮೇಶ್ವರ
PublicNext
11/01/2025 09:08 am