", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/378325-1738661433-5.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಮೈಕ್ರೋ ಫೈನಾನ್ಸ್ ಟಾರ್ಚರ್ ಬ್ರೇಕ್ಗೆ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ಮುಂದಾದ್ರೂ ಗದಗ ಜಿಲ್ಲೆಯಲ್ಲಿ ಕಿರುಕುಳ ನಿಲ್ಲುವ ಲಕ್ಷಣಗಳು ಕಾಣು...Read more" } ", "keywords": "Gadag, Finance Company, Harassment, Elderly Woman, Loan Repayment, Interest Payment, Financial Crisis, Karnataka News, Gadag News, Financial Harassment, Loan Default.,Crime,Law-and-Order", "url": "https://publicnext.com/article/nid/Gadag/Crime/Law-and-Order" } ಗದಗ : ಬಡ್ಡಿ ಹಣ ಕೊಡದಿದ್ದಕ್ಕೆ ವೃದ್ಧೆ ಮನೆಗೆ ಬೀಗ ಜಡಿದ ಫೈನಾನ್ಸ್ ಸಿಬ್ಬಂದಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಬಡ್ಡಿ ಹಣ ಕೊಡದಿದ್ದಕ್ಕೆ ವೃದ್ಧೆ ಮನೆಗೆ ಬೀಗ ಜಡಿದ ಫೈನಾನ್ಸ್ ಸಿಬ್ಬಂದಿ

ಗದಗ: ಮೈಕ್ರೋ ಫೈನಾನ್ಸ್ ಟಾರ್ಚರ್ ಬ್ರೇಕ್ಗೆ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ಮುಂದಾದ್ರೂ ಗದಗ ಜಿಲ್ಲೆಯಲ್ಲಿ ಕಿರುಕುಳ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಗದಗ ಜಿಲ್ಲೆಯಲ್ಲಿ 10 ಸಾವಿರ ರೂಪಾಯಿ ಬಡ್ಡಿ ಹಣಕ್ಕಾಗಿ 65 ವರ್ಷದ ವೃದ್ಧೆಯ ಮನೆಗೆ, ಬಡ್ಡಿ ದಂಧೆಕೋರರು ಬೀಗ ಹಾಕಿದ್ದಾರೆ. ಜಿಲ್ಲೆಯ ರೋಣ ಪಟ್ಟಣದ ಉಷಾದೇವಿ ಶಾಂತಸ್ವಾಮಿಮಠ ಎಂಬ 65 ವರ್ಷದ ವೃದ್ಧೆಯನ್ನು ಮನೆಯಿಂದ ಹೊರಹಾಕಿ ಬೀಗ ಹಾಕಿರುವ ಅಮಾನವೀಯ ಘಟನೆ ನಡೆದಿದೆ. ಶಾಂತಾದೇವಿ ಅವರು ಸ್ಥಳೀಯ ಮೌಲಾಸಾಬ್ ಬೆಟಗೇರಿ ಎಂಬುವರ ಬಳಿ 10 ಸಾವಿರ ರೂಪಾಯಿ ಸಹೋದರನ ಚಿಕಿತ್ಸೆಗಾಗಿ ಸಾಲ ಪಡೆದಿದ್ದಳು. ಸಹೋದರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ವೃದ್ಧೆಗೆ ತೊಂದರೆಗಳ ಮೇಲೆ ತೊಂದರೆಗಳು ಬಂದಿವೆ. ಸದ್ಯ ಸಾಲ ತೀರಿಸಲು ಆಗುತ್ತಿಲ್ಲ, ಕಾಲಾವಕಾಶ ಕೊಡಿ ಅಂತ ಬೇಡಿಕೊಂಡಿದ್ದಾಳೆ. ಆದ್ರೂ ಕೇಳದ ಬಡ್ಡಿ ದಂಧೆಕೋರ ಮೌಲಾಸಾಬ್ ಮನಬಂದಂತೆ ಮಾತನಾಡಿ, ವೃದ್ಧೆಯನ್ನು ಹೊರಹಾಕಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾನೆ. ಇದರಿಂದ ದಿಕ್ಕು ತೋಚದ ವೃದ್ಧೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Somashekar
PublicNext

PublicNext

04/02/2025 03:01 pm

Cinque Terre

28.26 K

Cinque Terre

1

ಸಂಬಂಧಿತ ಸುದ್ದಿ