ಗದಗ: ಹಂದಿಗಳ ಹಾವಳಿಯಿಂದ ಗದಗ ಜಿಲ್ಲೆ ನರೆಗಲ್ಲ್ ಪಟ್ಟಣದ ಜನತೆ ಹೈರಾಣಾಗಿದ್ದು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ನೀಡಿದ ಪರಿಣಾಮ ದಿನಾಂಕ:02/06/2022 ರಂದು ಪಟ್ಟಣ ಪಂಚಾಯತಿಗೆ ಯೋಜನಾ ನಿರ್ದೇಶಕರು ಆಗಮಿಸಿದ ಸಂಧರ್ಭದಲ್ಲಿ ಸಾರ್ವಜನಿಕರು ಪಟ್ಟಣ ಹಲವಾರು ಸಮಸ್ಯೆಗಳ ಬಗ್ಗೆ ಯೋಜನಾ ನಿರ್ದೇಶಕರ ಗಮನಕ್ಕೆ ತಂದರು ಅದರಲ್ಲೂ ಹಂದಿಗಳ ಹಾವಳಿ ಕುರಿತು ಅವರ ಗಮನಕ್ಕೆ ತರಲಾಯಿತು ಪ.ಪಂ.ಅಧಿಕಾರಿಗಳಿಗೆ ಇನ್ನು ಹತ್ತು ದಿವಸದೊಳಗೆ ಹಂದಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.ಆದರೆ ಮೂರು ತಿಂಗಳ ಕಳೆದರು ಇಲ್ಲಿಯವರೆಗೆ ಪಟ್ಟಣದ ಜನತೆಗೆ ಹಂದಿಗಳ ಕಾಟ ತಪ್ಪೆ ಇಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದರು.
ಹಂದಿಗಳ ಹಾವಳಿಗೆ ಜನ ಬೇಸ್ತು ತಪ್ಪದ ಹಂದಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಂದಿಗಳ ಉಪಟಳ ಊರು ಸಮೀಪವಿರುವ ತೊಟಕ್ಕೆ ಹಾಗೂ ಜಮೀನುಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡಿವೆ ಹಾಗೂ ಮೆವು ಹಾಗೂ ಹೊಟ್ಡುಗಳನ್ನು ಹಾಳು ಮಾಡುತ್ತಿವೆ ಊರಲ್ಲಿ ತಿರುಗಾಡುತ್ತಾ ಸಾಂಕ್ರಾಮಿಕ ರೋಗಗಳ ಬೀತಿ ಹಾಗೂ ಭಯದ ಜೀವನ ನಡೆಸುತ್ತಿರುವ ಪಟ್ಟಣದ ಜನತೆ ಹಂದಿ ಸಾಕಾಣಿಕೆದಾರರಿಗೆ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು ಕಾನೂನು ಪಾಲಿಸದಿದ್ದರೆ ಪ್ರಕರಣ ದಾಖಲಿಸಬೇಕು ಹಂದಿಗಳನ್ನು ಹಿಡಿದು ಊರಾಚೆ ಬಿಟ್ಟು ಬರಬೇಕು. ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸಾರ್ವಜನಿಕರ ಓಡಾಡುವುದಕ್ಕೂ ಹೆದರುತ್ತಿದ್ದಾರೆ ಎಂದು ಪಟ್ಟಣದ ಜನತೆ ಆಕ್ರೋಶ ವ್ಯಕ್ತಪಡಿಸಿದರು.
ಹೌದು ಪಟ್ಟಣದ 17 ವಾರ್ಡಗಳಲ್ಲೂ ಕೂಡಾ ಹಂದಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸ್ಥಳೀಯರು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಸಾಕಷ್ಟು ಮನವಿ ನೀಡಿದರು ಆಡಳಿತ ಹಾಗೂ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ರಸ್ತೆಯ ಮೇಲೆ ಹಂದಿಗಳು ದಿಢೀರನೇ ಅಡ್ಡ ಬಂದಾಗ ಕಕ್ಕಾಬಿಕ್ಕಿಯಾಗುವ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
ಹಂದಿಗಳ ಹಾವಳಿಯನ್ನು ತಪ್ಪಿಸದಿದ್ದರೆ ಮುಂದೇನು ಎನ್ನುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ,ಹಂದಿಗಳ ಮಾಲೀಕರಿಗೆ ಪಟ್ಟಣದ ಕಡೆಯಿಂದ ಅನೇಕ ಬಾರಿ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಲಾಗಿದ್ದರು ಎನೂ ಪ್ರಯೋಜನವಾಗಿಲ್ಲ. ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳುವ ಮೊದಲೆ ಪಟ್ಟಣದ ಹಂದಿ ಸಾಕಾಣೆಕದಾರರಿಗೆ ನೋಟಿಸ್ ನೀಡಬೇಕು, ಸ್ಪಂದಿಸದ್ದಿದ್ದ ಪಕ್ಷದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದರು.
Kshetra Samachara
30/09/2022 04:51 pm