ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳೆ ಹಾನಿ,ಬೆಳೆ ವಿಮೆ ಶೀಘ್ರ ಬಿಡುಗಡೆಗೊಳಿಸಿ

ಗದಗ : ಅತಿವೃಷ್ಟಿಯಿಂದ ಹಾಳಾಗಿರುವ ಬೆಳೆಗೆ ಪರಿಹಾರ ನೀಡುವುದು ಹಾಗೂ ಬೆಳೆವಿಮೆಯ ಪರಿಹಾರಧನವನ್ನು ಶೀಘ್ರವೇ ನೀಡಬೇಕು ಹಾಗೂ ಬ್ಯಾಂಕ್‌ಗಳಿಂದ ರೈತರಿಗೆ ಆಗುತ್ತಿ ರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ರೈತಪರ ಹೋರಾಟ ವೇದಿಕೆಯ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಅವರು ಲಕ್ಷ್ಮೇಶ್ವರ ತಾಲೂಕಿನಲ್ಲಿ ಅತಿವೃಷ್ಟಿ ಯಿಂದ ಹಾಳಗಿರುವ ಬೆಳೆಗಳಿಗೆ ಶೀಘ್ರದಲ್ಲಿ ಪರಿಹಾರ ನೀಡುವ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಬೇಕು. ಬೆಳೆವಿಮೆ ಪರಿಹಾರವನ್ನು ಕಂಪನಿಗಳಿಂದ ಕೊಡಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಅತಿಯಾಗಿ ಮಳೆಯಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡು ತೊಂದರೆಗೆ ಈಡಾಗಿರುವ ವೇಳೆ ಬ್ಯಾಂಕುಗಳು ರೈತರಿಗೆ ಸಾಲ ತುಂಬ ವಂತೆ ನೀಡುತ್ತಿರುವ ಕಿರುಕುಳ ತಪ್ಪಿಸಿಬೇಕು. ಶೀಘ್ರದಲ್ಲಿಯೇ ಈ ಕುರಿತು ಕ್ರಮಕೈಗೊಳ್ಳ ಹೋದಲ್ಲಿ ಲಕ್ಷೇಶ್ವರ ತಾಲೂಕನ್ನು ಬಂದ ಮಾಡುವ ಮೂಲಕ ಉಗ್ರ ಪ್ರತಿಭಟನೆ ಕೊಳ್ಳಲಾಗುವುದು ಎ೦ದು ಎಚ್ಚರಿಸಿದರು.

ಈ ವೇಳೆ ಶಿವಾನಂದ ಲಿಂಗರ ಖಾನಸಾಬ ಸೂರಣಗಿ, ಪದ್ಮರಾಜ ಗೌಳಿ ಇದ್ದರು.

Edited By : PublicNext Desk
Kshetra Samachara

Kshetra Samachara

30/09/2022 01:12 pm

Cinque Terre

6.34 K

Cinque Terre

0