ನರಗುಂದ: ಲಕ್ಷ ಲಕ್ಷ ಹಣ ಕೊಟ್ಟು ಕೃಷಿಹೊಂಡ ನಿರ್ಮಿಸುವ ತಾಕತ್ತು ಈಗ ರೈತನಿಗೆ ಎಲ್ಲಿದೆ!? ದೇಶಪಾಂಡೆ ಫೌಂಡೇಶನ್ ಸಹಕಾರ ನೀಡಿದ ಫಲವೇ ನಮ್ಮ ಜಮೀನಿನಲ್ಲೂ ಒಂದು ಕೃಷಿಹೊಂಡ ಇದೆ. ನಮ್ಮಿಷ್ಟದ ಬೆಲೆ ಹೆಚ್ಚಳದ ಬೆಳೆ ಬೆಳೆಯುವ ದಾರಿ ಇದೆ ಎಂಬುದು ರೈತ ರಾಮಚಂದ್ರಪ್ಪ ಧರ್ಮಪ್ಪ ತಹಶೀಲ್ದಾರ ಅವರ ಅಭಿಪ್ರಾಯ.
ನರಗುಂದ ತಾಲೂಕಿನ ಯಾವಗಲ್ ಗ್ರಾಮದ ರೈತ ರಾಮಚಂದ್ರಪ್ಪ ಧರ್ಮಪ್ಪ ತಹಶೀಲ್ದಾರ ತಮ್ಮ 12 ಎಕರೆ ಭೂಮಿಗೆ ಹೊಂದಿಕೊಂಡಂತೆ ಒಂದು ಕೃಷಿಹೊಂಡ ನಿರ್ಮಿಸಿಕೊಂಡ ಕೃಷಿಹೊಂಡ. ಇಂದು ಸಂಕಷ್ಟದ ಗೊಡವೆಗಳನ್ನು ತೊಡೆದು ಇಷ್ಟದ ಹಾದಿ ಸಮೃದ್ಧಿಯ ಬೆಳೆಯನ್ನು ದಯಪಾಲಿಸಿದೆ.
ಅದರಂತೆ ಮುಂಗಾರು ಅತ್ಯುತ್ತಮ ಇಳುವರಿಯ ಹೆಸರು ಬೆಳೆದ ರೈತ ರಾಮಚಂದ್ರಪ್ಪ ಕೃಷಿಹೊಂಡ ಆಶ್ರಿತವಾಗಿ 12 ಎಕರೆ ಜಮೀನಿನಲ್ಲಿ ವಾರ್ಷಿಕ 5 ಲಕ್ಷ ನಿವ್ವಳ ಆದಾಯ ಕಂಡಿದ್ದಾರೆ, ಇದಕ್ಕೆ ಕೇವಲ ದೇಶಪಾಂಡೆ ಫೌಂಡೇಶನ್ ಒಂದೇ ಸಹಕಾರಿಯಲ್ಲಾ ಅದಕ್ಕೆ ಪೂರಕವಾಗಿ ಶ್ರಮ, ದುಡಿಮೆ, ಮಳೆ ಬಿಸಿಲೆನ್ನದೇ ಭೂತಾಯಿಯನ್ನೇ ಅರಸುವ ಅವರ ಕಾಯಕವೂ ಸಹ ಬೆಂಬಲ ನೀಡಿದೆ.
ಅದರಂತೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ರಾಮಚಂದ್ರಪ್ಪ ಕೃಷಿ ಬದುಕಿನ ಸವಾಲೇನು ? ಕೃಷಿಹೊಂಡ ಹೇಗೆ ಉಪಕಾರಿ ? ಬೆಳೆಗೆ ಯಾವ ರೀತಿಯಲ್ಲಿ ಸಹಕಾರಿ ಎಂಬುದರ ಕುರಿತು ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ, ರೈತರೊಡನೆ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...
PublicNext
16/09/2022 10:00 am