ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ : 65ರ ಇಳಿವಯಸ್ಸು; ಕೃಷಿ ಕಾಯಕಕ್ಕೆ ಕೃಷಿ ಹೊಂಡವೇ ಹುಮ್ಮಸ್ಸು

ನರಗುಂದ : ಒಂದು ಸಾಧನೆಯ ಹಿಂದೆ ಶ್ರಮವಿರುತ್ತೆ. ಆ ಶ್ರಮಕ್ಕೆ ಪೂರಕವಾದ ಕಾರ್ಯ ಇರುತ್ತೇ ಎಂಬುದಕ್ಕೆ ಇಲ್ಲೊಬ್ಬರು ಇಳಿವಯಸ್ಸಿನ ರೈತರ ಸಾಧನೆ ಸ್ಫೂರ್ತಿಯಾಗಿ ನಾಲ್ಕು ಎಕರೆ ಜಮೀನು ಕುಟುಂಬದ ಆರ್ಥಿಕ ಸ್ಥಿತಿ ನೀಗಿಸಿದೆ.

ನರಗುಂದ ತಾಲೂಕಿನ ಕೌಜಗೇರಿ ಗ್ರಾಮದ ಮಲ್ಲಪ್ಪ ರುದ್ರಪ್ಪ ಹೂಗಾರ ಎಂಬ ದೇಶ್ ಕೃಷಿ ಸಾಧಕ ಶ್ರಮದ ಸಾಧನೆ ಇದು.

ತಮ್ಮ 4 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಪಡೆದ 100/100 ಸುತ್ತಳತೆಯ ಒಂದು ಕೃಷಿಹೊಂಡ ರೈತರ ಬದುಕಿನಲ್ಲಿ ಆದಾಯದ ಹೊಸತನವನ್ನು ತುಂಬಿ, ಇಳಿವಯಸ್ಸಿನಲ್ಲೂ ಕೃಷಿ ಕೈಗೊಂಡು 65ರ ಪ್ರಾಯದ ರೈತ ಮಲ್ಲಪ್ಪನಿಗೆ ಬಲ ನೀಡಿದೆ.

ಕೃಷಿಹೊಂಡ ಆಶ್ರಿತ ನಾಲ್ಕು ಎಕರೆ ಜಮೀನಿನಲ್ಲಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಹೆಸರು, ಈರುಳ್ಳಿ, ಮೆಣಸಿನಕಾಯಿ, ತರಕಾರಿಯನ್ನು ಬೆಳೆದ ಇವರು ಉತ್ತಮ ಆದಾಯ ಗಳಿಸಿದ್ದಾರೆ.

ಬೇಸಾಯದಲ್ಲಿ ವಿಭಿನ್ನವಾದ ಬದಲಾವಣೆಗೆ ಕಾರಣವಾದ ಕೃಷಿಹೊಂಡದ ಬೇಸಾಯ ನೀರಾವರಿಯೇ ಉತ್ತಮ ಎನ್ನುವ ಮಟ್ಟಿಗೆ ರೈತ ಮಲ್ಲಪ್ಪ ಬದಲಾವಣೆ ಕಂಡಿದ್ದಾರೆ. ಬನ್ನಿ ಹಾಗಿದ್ರೇ ರೈತ ಮಲ್ಲಪ್ಪ ಹೂಗಾರ ಜೊತೆ ಪಬ್ಲಿಕ್ ನೆಕ್ಸ್ಟ್ ನಡೆಸಿದ ದೇಶ್ ಕೃಷಿ ಸಂಚಿಕೆಯ ಸಾಧನೆ ಚಿಟ್ ಚಾಟ್ ನೋಡೋಣ...

Edited By : Shivu K
PublicNext

PublicNext

15/09/2022 10:14 am

Cinque Terre

147.02 K

Cinque Terre

0