ಗದಗ: ಅಡ್ಡ ಬಂದ ನಾಯಿಯನ್ನ ತಪ್ಪಿಸಲು ಹೋಗಿ ಬೈಕ್ ಸವಾರ ರಸ್ತೆ ಪಕ್ಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬೂದಿಹಾಳ ಬಳಿ ನಡೆದಿದೆ.
ಮಾಯಪ್ಪ ವಡ್ಡಟ್ಟಿ (38) ಅನ್ನುವಾತ ಮೃತ ಕಾರ್ಮಿಕನಾಗಿದ್ದು, ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದವನೆಂದು ತಿಳಿದು ಬಂದಿದೆ. ಗೌಂಡಿ ಕೆಲಸಕ್ಕೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ಬೈಕ್ ಸವಾರ ಮೃತ ಮಾಯಪ್ಪ ವೇಗವಾಗಿ ಚಲಿಸುವ ವೇಳೆ ಅಡ್ಡ ಬಂದ ನಾಯಿಯನ್ನ ತಪ್ಪಿಸಲು ರಸ್ತೆ ಪಕ್ಕ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/09/2022 01:39 pm