ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ರಿಯಾಲಿಟಿ ಶೋನಿಂದ ಕಿರುತೆರೆಯ 'ಸೀತಾವಲ್ಲಭ' ಧಾರಾವಾಹಿ ನಟಿ ಮಲೆನಾಡಿನ ಸುಂದರಿ ಸ್ಫೂರ್ತಿ ಗೌಡ ಔಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಸ್ಫೂರ್ತಿ ಗೌಡ ಕಾಣಿಸಿಕೊಂಡಿದ್ದರು. ಒಂದಲ್ಲಾ ಒಂದು ವಿಚಾರವಾಗಿ ಸ್ಫೂರ್ತಿ ಸದ್ದು ಮಾಡುತ್ತಿದ್ದರು. ಬಿಗ್ ಬಾಸ್ ಮನೆಯ ಮೊದಲನೇ ವಾರದಿಂದ ಕಿರಣ್ ಯೋಗೇಶ್ವರ್ ಓಟ್ ಆಗಿದ್ದರು. ಈಗ ಎರಡನೇ ವಾರ ಸ್ಫೂರ್ತಿ ಗೌಡ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯ ಕದ ಸ್ಫೂರ್ತಿ ಪಾಲಿಗೆ ಇಲ್ಲದಂತೆ ಆಗಿದೆ.
ತಮಗೆ ಅವಕಾಶ ಸಿಗುತ್ತಿಲ್ಲ ಎಂದು ನೊಂದುಕೊಂಡಿದ್ದ ಸ್ಫೂರ್ತಿ, ಕೊನೆಗೆ ಸಿಕ್ಕ ಅವಕಾಶವನ್ನ ಕೈಚೆಲ್ಲಿದರು. ಅಲ್ಲದೇ ಈ ವಾರದ ಕಳಪೆ ಪ್ರದರ್ಶನ ಎಂಬ ಹಣೆಪಟ್ಟಿ ಕೂಡ ಅವರಿಗೆ ಸಿಕ್ಕಿತ್ತು. ಟಾಸ್ಕ್‌ಗಳಲ್ಲಿ ಸರಿಯಾಗಿ ಪರ್ಫಾಮ್ ಮಾಡದ ಕಾರಣ ಸ್ಫೂರ್ತಿ ಗೌಡರನ್ನು ಜೈಲಿಗೆ ಕಳುಹಿಸಲಾಗಿತ್ತು. ಅಷ್ಟೊಂದು ವೀಕ್ಷಕರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದ ಸ್ಫೂರ್ತಿ ಗೌಡ, ನಿನ್ನೆಯ ದಿನ ಬಿಗ್ಬಾಸ್ ಜರ್ನಿಯನ್ನ ಅಂತ್ಯಗೊಳಿಸಿದ್ದಾರೆ.
PublicNext
21/08/2022 08:27 am