'ಬಿಗ್ ಬಾಸ್ ಕನ್ನಡ ಓಟಿಟಿ 1' ಕಾರ್ಯಕ್ರಮ ಶುರುವಾಗಿ ಒಂದು ವಾರ ಕಳೆದಿದೆ. ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆ ಕೂಡ ಮುಕ್ತಾಯವಾಗಿದ್ದು, ಮೊದಲ ಎಲಿಮಿನೇಷನ್ ಮುಗಿದಿದೆ. ವಾರದ ಪಂಚಾಯಿತಿ ನಡೆಸಿದ ಬಳಿಕ ಮೊದಲ ಎಲಿಮಿನೇಷನ್ ಪ್ರಕ್ರಿಯೆಯನ್ನ ಸುದೀಪ್ ನಡೆಸಿಕೊಟ್ಟರು. ಮೊದಲ ವಾರ ‘ಬಿಗ್ ಬಾಸ್’ ಮನೆಯಿಂದ ಕಿರಣ್ ಯೋಗೇಶ್ವರ್ ಔಟ್ ಆಗಿದ್ದಾರೆ.
ಕಿರಣ್ ಯೋಗೇಶ್ವರ್ ಮೂಲತಃ ರಾಜಸ್ಥಾನದವರು. ಮಾಡೆಲ್ ಕಮ್ ಡ್ಯಾನ್ಸರ್ ಆಗಿರುವ ಕಿರಣ್ ಯೋಗೇಶ್ವರ್ ಅವರಿಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ. ಆದರೂ 'ಬಿಗ್ ಬಾಸ್' ಮನೆಯಲ್ಲಿ ಆದಷ್ಟು ಕನ್ನಡದಲ್ಲೇ ಕಿರಣ್ ಯೋಗೇಶ್ವರ್ ಮಾತನಾಡುತ್ತಿದ್ದರು. ಒಂದೇ ವಾರದಲ್ಲಿ ಮನೆಯಲ್ಲಿ ಎಲ್ಲರ ಜೊತೆ ತುಂಬಾ ಆಪ್ತರಾಗಿದ್ದರು. ಕೊನೆಗೆ ಒಂದೇ ವಾರದಲ್ಲಿ ಮನೆಯಿಂದ ಹೊರನಡೆದರು. ಅವರ ಹಳೆಯ ಹಾಟ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
PublicNext
14/08/2022 04:29 pm