'ಬಿಗ್ ಬಾಸ್ ಕನ್ನಡ ಒಟಿಟಿ' ಶೋಗೆ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರನ್ನು ಸ್ಪರ್ಧಿಯಾಗಿ ಆಯ್ಕೆ ಮಾಡಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮೊದಲ ವಾರದಲ್ಲಿ ಸೋನು ಶ್ರೀನಿವಾಸ್ ಗೌಡ ನಾಮಿನೇಟ್ ಆಗಿದ್ದರು. ಆದರೆ ಜನರಿಂದ ವೋಟ್ ಪಡೆಯುವ ಮೂಲಕ ಅವರು ಸೇಫ್ ಆಗಿದ್ದಾರೆ. ಮೊದಲ ವಾರದ ಎಲಿಮಿನೇಷನ್ನಿಂದ ಬಚಾವ್ ಆಗಿರುವ ಅವರು ಕುಣಿದು ಕುಪ್ಪಳಿಸಿದ್ದಾರೆ.
ಈ ಹಿಂದೆ ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಅವರು ಟ್ರೋಲಿಗರ ಕೆಂಗಣ್ಣಿಗೆ ಗುರಿ ಆಗಿದ್ದರು. ಆ ಕಹಿ ಘಟನೆ ನಡೆದಿದ್ದು ಹೇಗೆ ಎಂಬ ಬಗ್ಗೆ ಮೊದಲ ವಾರವೇ ಅವರು ಬಿಗ್ ಬಾಸ್ ಮನೆಯಲ್ಲಿ ಬಾಯ್ಬಿಟ್ಟಿದ್ದಾರೆ. ಅಲ್ಲದೇ, ‘ನನ್ನದು ಇನ್ನೊಂದು ವಿಡಿಯೋ ಇದೆ. ಅದು ಯಾವಾಗ ಹೊರಬರುತ್ತೋ ಗೊತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. ಅವರ ನೇರ ನಡೆ-ನುಡಿಯ ವ್ಯಕ್ತಿತ್ವದ ಬಗ್ಗೆ ಇನ್ನುಳಿದ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
PublicNext
14/08/2022 03:49 pm