ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ನೂ 2 ಬೆರಳು, ಕಾಲನ್ನು ಕತ್ತರಿಸಿಕೊಳ್ಳಲು ಮುಂದಾದ 'ಬ್ಲ್ಯಾಕ್ ಏಲಿಯನ್'‍ನಂತೆ ಬದಲಾದ ವ್ಯಕ್ತಿ.!

ಪ್ಯಾರಿಸ್: ಮೈಮೇಲೆಲ್ಲಾ ಟ್ಯಾಟೂ ಹಾಕಿಸಿಕೊಂಡು 'ಬ್ಲ್ಯಾಕ್ ಏಲಿಯನ್' ಆಗಿ ರೂಪಾಂತರವಾಗಿರುವ ಫ್ರೆಂಚ್‌ನ ಆಂಥೋನಿ ಲೋಫ್ರೆಡೊ ಈಗ ಮತ್ತೆ 2 ಬೆರಳು, ಕಾಲನ್ನು ಕತ್ತರಿಸಿಕೊಳ್ಳಲು ಮುಂದಾಗಿದ್ದಾನೆ.

33 ವರ್ಷ ಪ್ರಾಯದ ಆಂಥೋನಿ ಲೋಫ್ರೆಡೊ ಈಗಾಗಲೇ ತನ್ನ ಕಣ್ಣುಗುಡ್ಡೆಗಳನ್ನು ಒಳಗೊಂಡಂತೆ ತನ್ನ ದೇಹವನ್ನು ಟ್ಯಾಟೂಗಳಲ್ಲಿ ಮುಚ್ಚಿಕೊಂಡಿದ್ದಾನೆ. ತನ್ನ ಮೂಗು, ಕಿವಿ, ತುಟಿಯನ್ನು ಕತ್ತರಿಸಿಕೊಂಡು 'ಕಪ್ಪು ಅನ್ಯಗ್ರಹ' (ಬ್ಲ್ಯಾಕ್ ಏಲಿಯನ್) ದಂತೆ ಕಾಣುತ್ತಿದ್ದಾನೆ. ಹೀಗಿದ್ದರೂ ಅವನು ಕಾಲು ಹಾಗೂ 2 ಬೆರಳು ಬೆರಳುಗಳನ್ನು ಕತ್ತಿರಿಸಿಕೊಳ್ಳಲು ಯೋಚಿಸಿದ್ದಾನಂತೆ. ಇದೇ ವಿಚಾರವಾಗಿ ಮಾತನಾಡಿರುವ ಆಂಥೋನಿ ಲೋಫ್ರೆಡೊ, "ನಾನು ಆರೋಗ್ಯಕರ ಕಾಲು ಹೊಂದಿರುವುದರಿಂದ ಇದು ನಿಜವಾಗಿಯೂ ಕಷ್ಟಕರವಾಗಿದೆ ಮತ್ತು ಅಂಗಚ್ಛೇದನವು ಭಾರಿ ನೋವು ತರುವ ಕೆಲಸವಾಗಿದೆ" ಎಂದು ಹೇಳಿಕೊಂಡಿದ್ದಾನೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಂಥೋನಿ ಲೋಫ್ರೆಡೊ, "ನನ್ನ ಈ ರೂಪದಿಂದ ಯಾರು ನನಗೆ ಕೆಲಸ ಕೊಡುತ್ತಿಲ್ಲ. ನನ್ನ ಈ ರೂಪದಿಂದ ಬಹಳಷ್ಟು ಕೆಟ್ಟ ಸಂಗತಿಗಳು ನಡೆದಿದೆ. ಇದನ್ನು ನೋಡಿ ಕೆಲವರು ಧನಾತ್ಮಕವಾಗಿ ಅಭಿಪ್ರಾಯವನ್ನು ಕೊಡುತ್ತಿದ್ದು, ಇನ್ನೂ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ" ಎಂದು ಮನಬಿಚ್ಚಿ ಮಾತನಾಡಿದ್ದ.

Edited By : Vijay Kumar
PublicNext

PublicNext

02/08/2022 02:30 pm

Cinque Terre

36.79 K

Cinque Terre

1