ಉರ್ಫಿ ಚಾವೇದ್ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಎದೆ ಬಡಿದುಕೊಳ್ಳುತ್ತದೆ. ಈ ನಟಿ ಧರಿಸುವ ವಿಚಿತ್ರ ಬಟ್ಟೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಕ್ಯಾಟನ್ ಕ್ಯಾಂಡಿ ಸುತ್ತಿಕೊಂಡು, ಮೂರು ದಿನಗಳ ಹಿಂದೆ ಒಳ ಉಡುಪು ಕಾಣುವಂತೆ ಗ್ಲಾಸ್ ಪೇಪರ್ ಸುತ್ತಿಕೊಂಡು ಬಂದಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಹೌದು! ಉರ್ಫಿ ಈಗ ಹೂವಿನಿಂದ ಮಾನ ಮುಚ್ಚಿಕೊಂಡು ಬಂದಿದ್ದಾರೆ. ನಟಿ ಉರ್ಫಿ ಟ್ರಾನ್ಸಪರೆಂಟ್ ಬಟ್ಟೆ ಧರಿಸಿ ಮೈ ತುಂಬಾ ಪಿಂಕ್, ಪರ್ಪಲ್, ಎಲ್ಲೋ ಹೂಗಳನ್ನು ಅಂಟಿಸಿಕೊಂಡಿದ್ದಾರೆ. ಈ ಬಗ್ಗೆ ಕಮೆಂಟ್ ಮಾಡಿರುವ ಕೆಲ ನೆಟ್ಟಿಗರು, 'ಮೈಯಿಂದ ಒಂದು ಹೂ ಕೆಳಗೆ ಬಿದ್ದರೂ ಏನು ಮಾಡುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ಎಷ್ಟು ಜೇನು ಹುಳಗಳು ನಿಮ್ಮ ಮೈ ತುಂಬಿಕೊಂಡಿತ್ತು?, ನಮಗೆ ಬೇಕಿರುವ ಹೂ ಕಿತ್ತುಕೊಳ್ಳಬಹುದಾ?' ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿದ್ದಾರೆ.
PublicNext
25/04/2022 03:37 pm