ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯಾರ್ಥಿಗಳೊಂದಿಗೆ IAS ಅಧಿಕಾರಿ ಡಾನ್ಸ್- ವಿಡಿಯೋ ವೈರಲ್

ತಿರುವನಂತಪುರಂ: ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. ಮಹಿಳಾ ಐಎಎಸ್ ಅಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ರಣವೀರ್ ಸಿಂಗ್- ದೀಪಿಕಾ ಪಡುಕೋಣೆ ಅಭಿನಯದ ಗೋಲಿಯೋನ್ ಕಿ ರಾಸ್‌ಲೀಲಾ ರಾಮ್-ಲೀಲಾ ಚಿತ್ರದ 'ನಾಗದಾ ಸಂಗ್ ಧೋಲ್...' ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ವಿದ್ಯಾರ್ಥಿಗಳ ಗುಂಪಿನೊಂದಿಗೆ ಐಎಎಸ್ ಅಧಿಕಾರಿ ದಿವ್ಯಾ ಅವರು ನೃತ್ಯ ಮಾಡುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ ಪ್ರಕಾರ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕಲಾ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಲು ಐಎಎಸ್ ಅಧಿಕಾರಿ ದಿವ್ಯಾ ಅವರು ಕ್ರೀಡಾಂಗಣಕ್ಕೆ ತಲುಪಿದ್ದರು. ಈ ವೇಳೆ ಐಎಎಸ್ ದಿವ್ಯಾ ಎಸ್ ಅಯ್ಯರ್ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಐಎಎಸ್ ದಿವ್ಯಾ ಅವರು ಮಕ್ಕಳನ್ನು ಪ್ರೋತ್ಸಾಹಿಸಿ, ಬೆರೆಯುತ್ತಿದ್ದಾರೆ ಎಂದು ಬಳಕೆದಾರರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Edited By : Vijay Kumar
PublicNext

PublicNext

03/04/2022 05:36 pm

Cinque Terre

32.69 K

Cinque Terre

2