ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

" ದಿ ಕಾಶ್ಮೀರ್ ಫೈಲ್ಸ್ '' ಚಿತ್ರ ಕಾಂಗ್ರೆಸ್ ಕರಾಳ ಕೃತ್ಯದ ಪ್ರತಿಬಿಂಬ

ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ

ಕಾಶ್ಮೀರ್ ಕಣಿವೆಯಲ್ಲಿ ಇಸ್ಲಾಮಿಕ್ ಉಗ್ರರಿಂದ ಸಹಸ್ರಾರು ಕಾಶ್ಮೀರಿ ಪಂಡಿತರ ಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ, ಹಿಂದೂಗಳ ಮನೆ ಉರಿಯುತ್ತಿರುವಾಗ ಅದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುವ ಕುತಂತ್ರಿ ರಾಜಕಾರಣಿಗಳ ದುಷ್ಟ ಮುಖ ಅನಾವರಣಗೊಳಿಸುವ ಕಥಾ ವಸ್ತುವೇ " ಕಾಶ್ಮೀರ್ ಫೈಲ್ಸ್ '' ಚಲನ ಚಿತ್ರ.

ದೇಶದಾತ್ಯಂತ ಬಿಡುಗಡೆಗೊಂಡಿರುವ " ದಿ ಕಾಶ್ಮೀರ್ ಫೈಲ್ಸ್ '' ಚಿತ್ರ ನೋಡಿದ ಪ್ರತಿಯೊಬ್ಬ ಭಾರತೀಯ, ಕಾಶ್ಮೀರಿ ಪಂಡಿತರ ಅಂದಿನ ದಯನೀಯ ಸ್ಥಿತಿ ಕಂಡು ಅದನ್ನು ತಾವೇ ಅನುಭವಿಸಿದ್ದೇವೆ ಎಂಬಂತೆ ಮಮ್ಮಲು ಮರಗುತ್ತಿದ್ದಾರೆ.

ಆದರೆ ಪಂಚ ರಾಜ್ಯಗಳ ದುರಂತ ಸೋಲಿನ ನಂತರವಾದರೂ ಬುದ್ಧಿ ಕಲಿಯಬೇಕಾಗಿದ್ದ ಕಾಂಗ್ರೆಸ್ " ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೂ ಕಾಂಗ್ರೆಸ್ಸಿಗೂ ಏನೂ ಸಂಬಂಧವಿಲ್ಲ '' ಎಂಬ ಉಡಾಫೆ ಹೇಳಿಕೆ ನೀಡಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಕಾಶ್ಮೀರ ಸಮಸ್ಯೆಯ ಜನಕ, ಫಾರೂಕ್ ಅಬ್ದುಲ್ಹಾಗೆ ಸಹಾಯ ಮಾಡಲು ಆರ್ಟಿಕಲ್ 370 ಹೇರಿ ಅಲ್ಲಿಯ ಉಗ್ರವಾದಿಗಳನ್ನು ಪೋಷಿಸಿದ ಕುಖ್ಯಾತಿಯ ಕಾಂಗ್ರೆಸ್ ಪಕ್ಷ ಇಂದು, ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ಹೇಳುತ್ತಿರುವುದು ಮತ್ತೊಂದು ದುರಂತ.

" 1990 ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ವಿ.ಪಿ ಸಿಂಗ್ ಸರಕಾರವಿತ್ತು. ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೂ ತನಗೂ ಏನೂ ಸಂಬಂಧವೇ ಇಲ್ಲ , ಪಂಡಿತರನ್ನು ಕೊಲ್ಲಿಸಿದ್ದು ಅಂದಿನ ಗವರ್ನರ್ ಜಗನ್ಮೋಹನ್. ಆತ ಆರ್ ಎಸ್ ಎಸ್ ಅನುಯಾಯಿ, ಆತನ ಆಜ್ಞೆಯಂತೆ ಕಾಶ್ಮೀರಿ ಪಂಡಿತರ ನರಮೇಧ ನಡೆದಿದೆ. ಕಾಂಗ್ರೆಸ್ ಸಂಪೂರ್ಣ ನಿರಪರಾಧಿ.'' ಎಂದು ಜಾರಿಕೊಳ್ಳಲು ಪ್ರಯತ್ನಿಸಿದೆ.

ಕಾಂಗ್ರೆಸ್ಸಿಗರೆ ದಾಖಲೆ ಪುಟ ತಿರುವಿ ನೋಡಿ 1984 ರಲ್ಲಿ ಜಗನ್ಮೋಹನ್ ಅವರನ್ನು ಜಮ್ಮು ಕಾಶ್ಮೀರ್ ಗವರ್ನರ್ ಮಾಡಿದ್ದೇ ಶ್ರೀಮತಿ ಇಂದಿರಾ ಗಾಂಧಿ. ಒಂದು ವೇಳೆ ಅವರು ಆರ್ ಎಸ್ ಎಸ್ ಆಗಿದ್ದರೆ ಇಂದಿರಾ ಅವರೇಕೆ ನೇಮಕ ಮಾಡುತ್ತಿದ್ದರು?

ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಂತರ ಪ್ರಚಂಡ ಬಹುತದಿಂದ ಅಧಿಕಾರಕ್ಕೆ ಬಂದಿದ್ದ ರಾಜೀವ್ ಗಾಂಧಿ ಐದು ವಷ (1984 - 1989 ) ಆಡಳಿತ ನಡೆಸಿದ್ದರು. ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ಆರಂಭವಾಗಿದ್ದೇ ಆ ಅವಧಿಯಲ್ಲಿ. ಹೌದು ದೌರ್ಜನ್ಯ ವಿ.ಪಿ ಸಿಂಗ್ ಅವಧಿಯಲ್ಲಿ ಮುಂದುವರಿದಿತ್ತು. ಆಗ ಅನಿವಾರ್ಯವಾಗಿ ಸಿಂಗ್ ಜಗನ್ಮೋಹನ್. ಅವರನ್ನು ಗವರ್ನರ್ ಆಗಿ ಮರು ನೇಮಕ ಮಾಡಬೇಕಾಯಿತು ಎಂಬುದನ್ನು ಕಾಂಗ್ರೆಸ್ಸಿಗರು ಮರೆಯಬಾರದು,

ಕಾಂಗ್ರೆಸ್ಸಿನ ಪ್ರಧಾನಿ ಡಾ: ಮನಮೋಹನ್ ಸಿಂಗ್ ಅವರು 2006 ರಲ್ಲಿ ಜೆಕೆಎಲ್ಎಫ್ ಉಗ್ರಸಂಘಟನೆ ನಾಯಕ ಯಾಸಿನ್ ಮಲ್ಲಿಕ್ ನನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿ ಬಿಗಿದಪ್ಪಿಕೊಂಡಿದ್ದರಲ್ಲ? ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

Edited By :
PublicNext

PublicNext

14/03/2022 04:16 pm

Cinque Terre

37.81 K

Cinque Terre

51