ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೀಲ್ಸ್ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ನಿವೇದಿತಾಗೆ 13 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಕೆಲವೊಂದು ರೀಲ್ಸ್ನಲ್ಲಿ ನಿವೇದಿತಾ ಗೌಡ ಅವರು ತಾಯಿಯ ಜೊತೆ ಕಾಣಿಸಿಕೊಂಡಿದ್ದಾರೆ.
ಅಮ್ಮ-ಮಗಳ ಡ್ಯಾನ್ಸ್ ನೋಡಿ ಫ್ಯಾನ್ಸ್ ಕೂಡಾ ಮೆಚ್ಚುಗೆ ಸೂಚಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಮ್ಮನ ಜೊತೆಗೆ ನಿವೇದಿತಾ ಗೌಡ ಮಾಡಿದ ರೀಲ್ಸ್ ಗೆ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನಿವೇದಿತಾ ಗೌಡ ಅವರ ಅಮ್ಮ ಮೊದಲು ಪರಮ್ ಸುಂದರಿ ಹಾಡಿಗೆ ರೀಲ್ಸ್ ಮಾಡಿದ್ರು ಆಗ ಆ ವೀಡಿಯೋ ಕೂಡಾ ಹೆಚ್ಚು ವೈರಲ್ ಆಗಿತ್ತು. ಹಾಗೆಯೇ ಅಮ್ಮ ಮಗಳ ಮತ್ತೊಂದು ರೀಲ್ಸ್ ಕೂಡಾ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸದ್ದು ಮಾಡ್ತಿದೆ.
PublicNext
18/12/2021 04:57 pm