ವಾಷಿಂಗ್ಟನ್: ಪಾತಕಿ ಕೂಡ ಮಾತೃ-ಪಿತೃ ವಿಯೋಗವಾದಾಗ ಕಣ್ಣೀರು ಇಡುತ್ತಾನೆ. ಆದರೆ ಪಾರ್ಟಿ ಡ್ರೆಸ್ ಧರಿಸಿ ತನ್ನ ತಂದೆಯ ತೆರೆದ ಶವಪೆಟ್ಟಿಗೆಯ ಮುಂದೆ ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಹೌದು. ಅಮೆರಿಕದ ಮಿಯಾಮಿಯಲ್ಲಿ ನಿವಾಸಿ 20 ವರ್ಷದ ಮಾಡೆಲ್ ರಿವೆರಾ ಇನ್‌ಸ್ಟಾಗ್ರಾಮ್ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಆದರೆ ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಿವೆರಾ ತಂದೆ ಇತ್ತೀಚೆಗೆ ನಿಧನರಾಗಿದ್ದರು. ತಂದೆಯ ಅಂತ್ಯಕ್ರಿಯೆ ನಡೆಸಿದ ಕೆಲವು ಫೋಟೋಗಳನ್ನು ಮಗಳು ರಿವೆರಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ರಿವೆರಾ ಫೋಟೋಗಳ ಜೊತೆಗೆ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.
PublicNext
28/10/2021 03:18 pm