ದೇಶಾದ್ಯಂತ ಇಂದು ನವರಾತ್ರಿ ಪರ್ವ ವಿಶೇಷ. ಶ್ರೀ ನವದುರ್ಗೆಯರ ಆರಾಧನೆಯನ್ನು ಎಲ್ಲೆಡೆ ಶ್ರದ್ಧಾ ಭಕ್ತಿ- ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇವಸ್ಥಾನ- ಮಂದಿರ, ಮನೆ, ಸಂಘ- ಸಂಸ್ಥೆಗಳಲ್ಲಿ ದೇವಿ ಪೂಜಾರಾಧನೆ ನಡೆಯುತ್ತಿವೆ. ಯಾವುದೇ ಸಾಂಸ್ಕ್ರತಿಕ- ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿ ಸ್ತುತಿ- ಪ್ರಸ್ತುತಿಯದ್ದೇ ಸಿಂಹಪಾಲು.
ವಾರದ ಹಿಂದೆ ಕಲರ್ಸ್ ( ಹಿಂದಿ) ಟಿ.ವಿ.ಯಲ್ಲಿ ಪ್ರಸಾರವಾದ ' ಡ್ಯಾನ್ಸ್ ದಿವಾನೆ 3 ಪ್ರೊಮೊ' ದಲ್ಲಿ ಪಪೈ ಮತ್ತು ಅಂತರ ಅವರ 'ಕಾಳಿ ರುದ್ರರೂಪ' ದರ್ಶನ ಇಡೀ ಪ್ರೇಕ್ಷಕ ಸಮೂಹವನ್ನೇ ರೋಮಾಂಚನಗೊಳಿಸಿತ್ತು! ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದ್ದು, "ಜನಪ್ರೀತಿ- (ಭೀತಿ)" ಗಳಿಸಿದೆ.
PublicNext
09/10/2021 03:28 pm