ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಬ್​ಸ್ಮ್ಯಾಶ್​ ವಿಡಿಯೋದಿಂದ ಸಸ್ಪೆಂಡ್: ಸರ್ಕಾರಿ ಕೆಲಸ ಬಿಟ್ಟ ಲೇಡಿ ಪೇದೆಗೆ ಬಂತು ಭರ್ಜರಿ​ ಆಫರ್​!​

ಲಕ್ನೋ: ತನ್ನ ಡಬ್​ಸ್ಮ್ಯಾಶ್​ ವಿಡಿಯೋದಿಂದ ಸಸ್ಪೆಂಡ್ ಆಗಿ ಸರ್ಕಾರಿ ಕೆಲಸಕ್ಕೆ ಗುಡ್‌ಬೈ ಹೇಳಿದ್ದ ಲೇಡಿ ಪೇದೆಗೆ ಈಗ ಬಂಬರ್ ಆಫರ್ ಬಂದಿದೆ.

ಹೌದು. ಉತ್ತರ ಪದೇಶದ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದ ಪ್ರಿಯಾಂಕಾ ಮಿಶ್ರಾ ಕರ್ತವ್ಯದ ವೇಳೆ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ರಿವಾಲ್ವರ್​ ಹಿಡಿದು ಡಬ್​ಸ್ಮ್ಯಾಶ್​ ವಿಡಿಯೋ ಮಾಡಿದ್ದರು. ಈ ವಿಡಿಯೋವನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟು, ನೆಟ್ಟಿಗರಿಂದ ಟ್ರೋಲ್​ ಆಗಿದ್ದರು. ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಪ್ರಿಯಾಂಕ ಅಮಾನತಾಗಿದ್ದರು. ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿರುವ ಪ್ರಿಯಾಂಕ ಮಿಶ್ರಾಗೆ ವೆಬ್​ ಸೀರಿಸ್​ ಮತ್ತು ಮಾಡೆಲಿಂಗ್​ನಲ್ಲಿ ಆಫರ್​ಗಳು ಬರುತ್ತಿವೆ.

ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಂಕಾ ಹೇಳಿಕೊಂಡಿದ್ದಾರೆ, "ಮಾಡೆಲಿಂಗ್​ ಅಥವಾ ನಟನೆಯಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಆ ಕ್ಷೇತ್ರಕ್ಕೆ ಪ್ರವೇಶ ನೀಡುತ್ತೇನೆ. ಸದ್ಯ ನನಗೆ ವೆಬ್​ ಸೀರಿಸ್​ ಮತ್ತು ಮಾಡೆಲಿಂಗ್​ನಿಂದ ಆಫರ್​ ಬಂದಿದೆ. ಆದರೆ ಅದನ್ನು ನಾನಿನ್ನು ಸ್ವೀಕರಿಸಿಲ್ಲ. ನಾನೇನೇ ನಿರ್ಧಾರ ತೆಗೆದುಕೊಂಡರು ಮೊದಲು ಯೋಚಿಸಿ ಆನಂತರ ಒಂದು ನಿರ್ಧಾರಕ್ಕೆ ಬರುತ್ತೇನೆ" ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

16/09/2021 05:44 pm

Cinque Terre

52.08 K

Cinque Terre

3