ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆಬ್ರುವರಿ 28ರಿಂದ ಬಿಗ್ ಬಾಸ್ ಹವಾ: ಹೌದು ಸ್ವಾಮಿ

ಬೆಂಗಳೂರು: ಫೆಬ್ರುವರಿ 28ರಿಂದ ಮತ್ತೆ ಬಿಗ್ ಬಾಸ್ ಹವಾ ಶುರವಾಗಲಿದೆ. ಅಂದು ಸಂಜೆ ಆರಕ್ಕೆ ಖಾಸಗೀ ವಾಹಿನಿಯಲ್ಲಿ 8ನೇ ಸೀಜನ್ ಬಿಗ್ ಬಾಸ್ ಸಂಚಿಕೆ ಪ್ರಸಾರವಾಗಲಿದೆ. ಈ ಸಲವೂ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸಿರುವ ಹೊಸ ಟೀಸರ್ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ 100 ದಿನಗಳ ಕಾಲ ನಡೆಯಲಿರುವ ಜನಪ್ರಿಯ ಬಿಗ್ ಬಾಸ್ ಶೋವನ್ನು ಅವರೇ ನಡೆಸಿಕೊಡಲಿದ್ದಾರೆ ಎಂದು ಘೋಷಿಸಲಾಗಿದೆ. ಫೆಬ್ರವರಿ 29ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಬಿಗ್ ಬಾಸ್ ಪ್ರಸಾರವಾಗಲಿದ್ದು, ಯಾವ ಸಮಯ ಎಂಬುದರ ಕುರಿತು ಇನ್ನೂ ಮಾಹಿತಿ ಹೊರ ಬಿದ್ದಿಲ್ಲ. ರಾತ್ರಿ 8ರಿಂದ ಪ್ರಸಾರವಾಗುವ ಸಾಧ್ಯತೆ ಇದೆ.

Edited By : Nagaraj Tulugeri
PublicNext

PublicNext

16/02/2021 02:39 pm

Cinque Terre

28.86 K

Cinque Terre

3