ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡುರಸ್ತೆಯಲ್ಲಿ ಸಿಂಹ; ಏನೂ ಮಾಡಲ್ಲ ಹೆದರಬೇಡಿ

ಸಿಚುವಾನ್ (ಚೀನಾ) ಪ್ರಪಂಚದಲ್ಲಿ ಯಾವುದೇ ಹೊಸ ತಂತ್ರಜ್ಞಾನ ಬಂದರೂ ಚೀನಾದವರು ಅದನ್ನು ತಮ್ಮ ದೇಶದಲ್ಲಿ ಮಾಡಿಯೇ ತೀರುತ್ತಾರೆ‌. ಆದ್ರೆ ಅದು ಅಸಲಿಯೋ ನಕಲಿಯೋ ಎನ್ನುವ ಪ್ರಶ್ನೆ ಬೇರೆ. ಅದರ ಬಗ್ಗೆ ಚೀನಾ ಮಂದಿ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ.

ಈ ವಿಡಿಯೋ ನೋಡಿದ್ರೆ ನಿಮಗೆಲ್ಲ ಸಡನ್ನಾಗಿ ಅನಿಸಬಹುದು. ಏನಪ್ಪಾ ಇದು ಮಾಲ್ ಮೇಲಿಂದ ಸಿಂಹ ಜಿಗೀತಾ ಇದೆಯಲ್ಲ ಅಂತ ಎಲ್ಲರೂ ಗಾಬರಿಯಾಗಿ ದಿಕ್ಕಾಪಾಲಾಗಿ ಓಡಬಹುದು. ಈಗಾಗಲೇ ಅಂತಹ ಘಟನೆಗಳು ಅಲ್ಲಿ ನಡೆದಿದೆ. ಆದ್ರೆ ಫ್ಯಾಕ್ಟ್ ಚೆಕ್ ಮಾಡಿದಾಗ ಇದು ನಿಜವಾದ ಸಿಂಹ ಅಲ್ಲವೇ ಅಲ್ಲ. ನಿಜವಾದ ಸಿಂಹ ಈ ಪಾಟಿ ದೊಡ್ಡದು ಇರೋದೇ ಇಲ್ಲ.

ಹಾಗಾದ್ರೆ ಏನಿದು? ಇದು 5ಜಿ ತಂತ್ರಜ್ಞಾನದ ಮೂಲಕ ರೂಪಿಸಲಾದ 3ಡಿ ಜಾಹೀರಾತು ಅಷ್ಟೇ. ಆದ್ರೆ ಮೊದಲ ಬಾರಿ ಇದನ್ನ ನೋಡಿದ ಕೆಲವರು ಗಾಬರಿಯಾಗಿದ್ದಂತೂ ನಿಜ. ಅಂದ್ ಹಾಗೆ ಇದನ್ನ ಚೀನಾದ ಸಿಚುವಾನ್ ನಗರದ ಮಾಲ್ ಒಂದರ ಮಹಡಿಯಲ್ಲಿ ಅಳವಡಿಸಲಾಗಿದೆ.

Edited By : Nagesh Gaonkar
PublicNext

PublicNext

06/01/2021 10:50 pm

Cinque Terre

71.27 K

Cinque Terre

2

ಸಂಬಂಧಿತ ಸುದ್ದಿ