ಇತ್ತಿಚ್ಚೆಗೆ ತಮಗೆ ಬೇಕಾದ ಪ್ರಾಣಿಗಳೊಂದಿಗಿನ ಪ್ರಾಣಿಪ್ರೀಯರು ಸಾಕಷ್ಟು ಮೋಜು ಮಸ್ತಿ ಮಾಡಿರುವ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯ..
ಮುದ್ದು ಸಾಕು ಪ್ರಾಣಿಗಳು ಏನು ಮಾಡಿದ್ರೂ ಒಂಥರಾ ಕ್ಯುಟ್ ಆಗಿ ಕಾಣುತ್ತದೆ.
ಬೀದಿಯಲ್ಲಿ ಕ್ರಿಕೆಟ್ ಆಡುತ್ತಿರುವ ವ್ಯಕ್ತಿಯೊಬ್ಬರು, ಆಟವಾಡಲು ಮನುಷ್ಯರ ಬದಲು ಮುದ್ದಿನ ನಾಯಿಯನ್ನು ಜೊತೆಗೆ ಸೇರಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಕೆಂಪು ಬಟ್ಟೆಯಲ್ಲಿ ಮಿಂಚುತ್ತಿರುವ ಮೂರು ನಾಯಿಗಳು ದೆಹಲಿಯ ಗಲ್ಲಿಯೊಂದರಲ್ಲಿ ಕ್ರಿಕೆಟ್ ಆಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ವ್ಯಕ್ತಿ ಬ್ಯಾಟಿಂಗ್ ಮಾಡುತ್ತಿದ್ದರೆ, ಬ್ಯಾಟ್ನಿಂದ ಸಿಡಿದ ಚೆಂಡನ್ನು ಹಿಡಿಯಲು ಶ್ವಾನ ಓಡುತ್ತಿರುವುದನ್ನು ನೋಡಬಹುದಾಗಿದೆ.
ಐಪಿಎಲ್ ಜ್ವರದಲ್ಲಿರುವ ಜನರಿಗೆ ಈ ವಿಡಿಯೋ ಸೂಪರ್ ಆಗಿದೆ ಎಂದಿದ್ದಾರೆ.
PublicNext
26/09/2020 09:03 am