ಬೆಂಗಳೂರು : ಕರ್ನಾಟಕದಲ್ಲಿ ಆರ್ಸಿಬಿ ಕ್ರೇಜ್ ಎಂದಿಗೂ ಕಡಿಮೆಯಾಗಿಲ್ಲ ಬಿಡಿ ಸೋಷಿಯಲ್ ಮೀಡಿಯಾ ತೆರೆದ್ರೆ ಅಭಿಮಾನಗಳ ಜೋಶ್ ಎದ್ದು ಕಾಣುತ್ತೆ.
ಈ ವರ್ಷವೂ ಅಂಥದ್ದೇ ಮನ ಕುಣಿಸೋ ಮತ್ತು ಮನ ತಣಿಸೋ ಹಾಡೊಂದು ಬಿಡುಗಡೆ ಆಗಿದ್ದು
ಟ್ರೋಲ್ ಹೈದ ಟೀಮ್ ಕಡೆಯಿಂದ ಸಿದ್ಧವಾದ ಈ ಹಾಡು ಸದ್ಯ ಯೂಟ್ಯೂಬ್ನಲ್ಲಿ ಒಳಗೆ ಸಖತ್ ಕ್ರೇಜ್ ಹುಟ್ಟುಹಾಕಿದೆ.
‘ಫಾರ್ಎವರ್ ಆರ್ಸಿಬಿ’ ಎಂಬ ಸಾಹಿತ್ಯದ ಮೊದಲ ನುಡಿಯಿಂದ ಆರಂಭವಾಗುವ ಈ ಹಾಡಿನಲ್ಲಿ ಸ್ಯಾಂಡಲ್ವುಡ್ ತಾರೆಯರು ಹಾಡಿಗೆ ಮೈ ಕೈ ಬಳುಕಿಸಿ ಧ್ವನಿ ಗೂಡಿಸಿದ್ದಾರೆ.
‘ಅಣು ಅಣುವಲು ಆರ್ಸಿಬಿ.. ಕಣಕಣದಲ್ಲೂ ಆರ್ಸಿಬಿ… ಮನಮನದಲ್ಲೂ ಆರ್ಸಿಬಿ ಎಂದು ಶುರುವಾಗುವ ಹಾಡಿನಲ್ಲಿ, ವಿಜಯ್ ರಾಘವೇಂದ್ರ, ಪ್ರಣೀತಾ ಸುಭಾಷ್, ಅದಿತಿ ಪ್ರಭುದೇವ, ಎಂ.ಜಿ ಶ್ರೀನಿವಾಸ್, ವಿಕ್ಕಿ ವರುಣ್, ಸಂಜನಾ ಆನಂದ್, ಪ್ರಭು ಮುಂಡ್ಕೂರ್, ಅಮೃತಾ ಅಯ್ಯಂಗಾರ್, ಸಪ್ತಮಿ ಗೌಡ ಹಾಡಿನಲ್ಲಿ ಕಾಣಿಸಿಕೊಂಡು, ಆರ್ಸಿಬಿ ಅಭಿಮಾನಿಗಳಿಗೆ ಜೋಶ್ ತುಂಬಿದ್ದಾರೆ.
ಕೇವಲ ಸಿನಿಮಾ ತಾರೆಗಳಷ್ಟೇ ಅಲ್ಲಾ, ಕರೊನಾ ವಾರಿಯರ್ಸ್ ಪೊಲೀಸ್ ಇಲಾಖೆ, ಪೌರಕಾರ್ಮಿಕರು ಸಹ ಹಾಡಿನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಜೋಶ್ ನೀಡಿದ್ದಾರೆ. ಈ ಹಾಡಿನ ಟೆಕ್ನಿಕಲ್ ಟೀಮ್ ಗಮನಿಸುವುದಾದರೆ ಅನಿರುದ್ಧ ಶಾಸ್ತ್ರಿ, ಮೈತ್ರಿ ಅಯ್ಯರ್, ಮದ್ವೇಶ್ ಭಾರದ್ವಾಜ್ ಹಾಡಿಗೆ ಧ್ವನಿ ನೀಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ಕ್ರಿಯೇಟಿವ್ ಮುಖ್ಯಸ್ಥರಾಗಿ ನಯನ್ ತೆಮ್ಕರ್ ಕಾರ್ಯ ಮಾಡಿದ್ದಾರೆ. ಈ ಹಾಡು ಸೆರೆ ಹಿಡಿದವರು ಉದಯ್ ಲೀಲಾ. ಹಾಡಿಗೆ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ ಅನಿರುದ್ಧ ಶಾಸ್ತ್ರಿ. ಸಾಗರ್ ಮಹದೇವ್ ಸಂಕಲನ ಮತ್ತು ವಿಎಫ್ಎಕ್ಸ್ ನಿರ್ವಹಿಸಿದ್ದಾರೆ. ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ ಮಾಡಿದ್ದಾರೆ.
PublicNext
19/09/2020 02:21 pm