ವಿಯೆನ್ನಾ: ಬಾರ್ಬಿ ಡಾಲ್‌ನಂತೆಯೇ ಕಾಣಿಸಿಕೊಳ್ಳಲು, ಯುವತಿಯೊಬ್ಬಳು ತನ್ನ ದೇಹದ ಅನೇಕ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳಲು 24 ಲಕ್ಷ ರೂ. ಖರ್ಚು ಮಾಡಿದ್ದಾಳೆ!
ಜರ್ಮನ್ ಮೂಲದ 20 ವರ್ಷದ ಜೆಸ್ಸಿ ಬನ್ನಿಗೆ ಬಾರ್ಬಿ ಡಾಲ್‌ನಂತಾಗಬೇಕೆಂದು ಕನಸಿತ್ತಂತೆ. ಇದಕ್ಕೆ ತಂದೆ-ತಾಯಿ ವಿರೋಧಿಸಿದ್ದರು. ಇದರಿಂದಾಗಿ ಪೋಷಕರನ್ನು ಬಿಟ್ಟು ತ್ಯಜಿಸಿ ಆಸ್ಟ್ರೇಲಿಯಾದ ವಿಯೆನ್ನಾಕೆ ಬಂದು ನೆಲೆಸಿದ್ದಾಳೆ. ಈ ಹಿಂದೆ ಪೋಷಕರು ನೀಡಿದ್ದ ಹಣವನ್ನು ಕೂಡಿಟ್ಟ ಹಣದಲ್ಲಿಯೇ , ಬ್ರೆಸ್ಟ್ ಎನ್‌ಲಾರ್ಜ್‌ಮೆಂಟ್ ಸರ್ಜರಿ, ತುಟಿಗಳ ಸರ್ಜರಿ ಸೇರಿ ಅನೇಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಆಕೆಗೆ ಇದೀಗ ತಾನು ಸುಂದರವಾಗಿ ಕಾಣುತ್ತಿದ್ದೇನೆ ಎನ್ನುವ ಭಾವನೆ ಹೆಚ್ಚಿದ್ದು, ಆತ್ಮವಿಶ್ವಾಸವೂ ಹೆಚ್ಚಾಗಿದೆಯಂತೆ.
PublicNext
06/09/2021 08:27 am